Hidenburg Research Company Closed: ಅದಾನಿ ಇಂಡಸ್ಟ್ರೀಸ್ ಗ್ರೂಪ್ ವಿರುದ್ಧ ಆರೋಪ ಹೊರಿಸಿದ್ದ ಹಿಂಡೆನ್‌ಬರ್ಗ್ ರಿಸರ್ಚ ಕಂಪನಿ ಬಂದ್ !

ನಿರ್ಧರಿಸಿದ್ದನ್ನು ಪೂರೈಸಿದ ನಂತರ ಕಂಪನಿಯನ್ನು ಮುಚ್ಚಲು ನಿರ್ಣಯ ಕೈಗೊಂಡಿದ್ದೇವೆ ಎಂದು ಸಂಸ್ಥಾಪಕರು ಸ್ಪಷ್ಟಪಡಿಸಿದರು !

ನವ ದೆಹಲಿ – ಅಮೆರಿಕದ ಕಂಪನಿ ‘ಹಿಂಡೆನ್‌ಬರ್ಗ್ ರಿಸರ್ಚ್’ ಕಂಪನಿಯನ್ನು ಮುಚ್ಚಲಾಗುವುದು ಎಂದು ಕಂಪನಿಯ ಸಂಸ್ಥಾಪಕ ನಾಥನ್ ಆಂಡರ್ಸನ್ ಇವರು ಜನವರಿ 15 ರ ರಾತ್ರಿ ಘೋಷಿಸಿದರು. ಅವರು ‘X’ ನಲ್ಲಿ ‘ಪೋಸ್ಟ್’ ಬರೆಯುವ ಮೂಲಕ ಈ ಘೋಷಣೆ ಮಾಡಿದ್ದಾರೆ. “ನಾವು ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ, ಈಗ ನಾವು ನಿರ್ಧರಿಸಿದ್ದೆಲ್ಲವೂ ಪೂರ್ಣಗೊಂಡಿದೆ, ನಾವು ಕಂಪನಿಯನ್ನು ಮುಚ್ಚುತ್ತಿದ್ದೇವೆ” ಎಂದು ಅವರು ಹೇಳಿದರು; ಆದರೆ, ಕಂಪನಿಯನ್ನು ಮುಚ್ಚಲು ನಾಥನ್ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಈ ಕಂಪನಿಯು 2017 ರಲ್ಲಿ ಪ್ರಾರಂಭಿಸಲಾಗಿತ್ತು.

ಆಗಸ್ಟ್ 2024 ರಲ್ಲಿ, ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯು ಭಾರತದಲ್ಲಿ ಅದಾನಿ ಗ್ರೂಪ್ ಶತಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ ಎಂದು ಆರೋಪಿಸಿದೆ. ‘ಸಿಕ್ಯೂರಿಟಿಜ್ ಎಂಡ್ ಎಕ್ಸಚೆಂಜ್ ಬೋರ್ಡ ಆಫ್ ಇಂಡಿಯಾ’ (‘ಸೆಬಿ’ಯ) ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹಕ್ಕೆ ಸಂಬಂಧಿಸಿದ ಒಂದು ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿಯಲ್ಲಿ ಹೇಳಿಕೊಂಡಿದ್ದರು.

ಸಂಪಾದಕೀಯ ನಿಲುವು

ಕಂಪನಿಯ ಸಂಸ್ಥಾಪಕರು ಅದನ್ನು ಮುಚ್ಚಲು ನಿರ್ದಿಷ್ಟ ಕಾರಣವನ್ನು ನೀಡಿಲ್ಲ, ಇದರಿಂದ ಈ ಕಂಪನಿಯನ್ನು ಭಾರತೀಯ ಉದ್ಯಮಕ್ಕೆ ಹಾನಿ ಮಾಡುವ ಉದ್ದೇಶದಿಂದ ಮಾತ್ರ ಸ್ಥಾಪಿಸಲಾಗಿದೆಯೇ ? ಅಮೆರಿಕದಲ್ಲಿ ಟ್ರಂಪ್ ಆಡಳಿತ ಅಧಿಕಾರಕ್ಕೆ ಬರುತ್ತಿರುವುದರಿಂದ ಅದನ್ನು ಮುಚ್ಚಲಾಗುತ್ತಿದೆಯೇ? ಇಂತಹ ಪ್ರಶ್ನೆಗಳು ಉದ್ಭವಿಸುತ್ತಿವೆ !