Hindu Rashtra Banner at Mahakumbh : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕುಂಭನಗರಿಯಲ್ಲಿ ಫಲಕದ ಮೂಲಕ ಹಿಂದೂ ರಾಷ್ಟ್ರ ಪ್ರಚಾರ

ಒಂದು ಖಂಬದ ಮೇಲೆ ಹಚ್ಚಲಾಗಿರುವ ಹಿಂದೂ ರಾಷ್ಟ್ರದ ವಿಷಯದ ಫಲಕ

ಪ್ರಯಾಗರಾಜ, ಜನವರಿ 16 (ಸುದ್ದಿ.) – ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರನ್ನು ತಲುಪಿ ಹಿಂದೂ ರಾಷ್ಟ್ರದ ಪ್ರಸಾರ ಮಾಡಲು ‘ಏಕಹಿ ಲಕ್ಷ್ಯ ಹಿಂದೂ ರಾಷ್ಟ್ರ’, ಸಭೀ ಸಮಸ್ಯಾವೋಂಕಾ ಏಕಮಾತ್ರ ಸಮಾಧಾನ ಹಿಂದೂ ರಾಷ್ಟ್ರ ಹಿಂದೂ ರಾಷ್ಟ್ರ’, (ಎಲ್ಲಾ ಸಮಸ್ಯೆಗಳಿಗೆ ಏಕೈಕ ಪರಿಹಾರ ಹಿಂದೂ ರಾಷ್ಟ್ರ ಹಿಂದೂ ರಾಷ್ಟ್ರ’?’) ‘ಕುಂಭ್ ಕೆ ಸಂತೋಂಕಿ ಗರ್ಜನಾ ಹಿಂದೂ ರಾಷ್ಟ್ರ’ ದಂತಹ ದೊಡ್ಡ ಫಲಕ ಮತ್ತು ಭವ್ಯ ಹೋರ್ಡಿಂಗಗಳನ್ನು ಹಚ್ಚಲಾಗಿದೆ. ಈ ಫಲಕಗಳ ಕುರಿತು ಸಂತರು, ಭಕ್ತರು ಮತ್ತು ಪ್ರಸಾರ ಮಾಧ್ಯಮಗಳಲ್ಲಿ ಚರ್ಚೆಗಳು ಆರಂಭವಾಗಿವೆ. ಕೆಲವು ದಿನಗಳ ಹಿಂದೆ ‘ಝೀ ನ್ಯೂಸ್’ ಹಿಂದಿ ಸುದ್ದಿ ವಾಹಿನಿ ‘ಕುಂಭನಗರಿಯಲ್ಲಿ ಹಚ್ಚಲಾಗಿದ್ದ ಒಂದು ಭವ್ಯ ಹೋರ್ಡಿಂಗ ಬಗ್ಗೆ `ಕುಂಭನಗರಿಯಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಸಂತರ ಮನವಿ’ ಈ ಶೀರ್ಷಿಕೆಯಡಿಯಲ್ಲಿ ಸುದ್ದಿ ವರದಿಯನ್ನು ಪ್ರಸಾರ ಮಾಡಿ, ಜನರ ಅಭಿಪ್ರಾಯವನ್ನು ತಿಳಿದುಕೊಂಡಿತು. ಈ ಸಮಯದಲ್ಲಿ ಅಲ್ಲಿದ್ದ ಜನರು “ಹೌದು, ನಮಗೆ ಹಿಂದೂ ರಾಷ್ಟ್ರ ಬೇಕೇ ಬೇಕು!” ಮತ್ತು “ಹಿಂದೂ ರಾಷ್ಟ್ರ ಅಗತ್ಯ!” ಎಂದು ಉತ್ಸಾಹದಿಂದ ಪ್ರತಿಕ್ರಿಯಿಸಿದರು.