ಮಹಾಕುಂಭ ಮೇಳದಲ್ಲಿ ‘ಸಂವಿಧಾನ ಕಕ್ಷೆ’ಯ ಉದ್ಘಾಟನೆ !

ಪ್ರಯಾಗರಾಜ್ – ಇಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ, ಉತ್ತರ ಪ್ರದೇಶ ಸರಕಾರದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಖನ್ನಾ ಅವರು ಇಲ್ಲಿನ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಸ್ಥಾಪಿಸಲಾದ ‘ಸಂವಿಧಾನ ಕೊಠಡಿ’ಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಜೆ.ಜೆ. ಮುನೀರ್ ಹಾಗೂ ಅಧ್ಯಕ್ಷತೆಯಲ್ಲಿ ‘ದಿವ್ಯ ಪ್ರೇಮ ಸೇವಾ ಮಿಷನ್’ ನ ಅಧ್ಯಕ್ಷ ಡಾ. ಆಶಿಶ್ ಗೌತಮ್ ಉಪಸ್ಥಿತರಿದ್ದರು. ಈ ಬಾರಿ, ಅವರಿಬ್ಬರೂ ಕೋಠಡಿಯಲ್ಲಿ ಪ್ರದರ್ಶನವನ್ನು ಅವಲೋಕಿಲಿಸಿದರು. ಈ ಪ್ರದರ್ಶನದಲ್ಲಿ ದೇಶದ ಸಂವಿಧಾನವನ್ನು ಆಧರಿಸಿದ ಪುಸ್ತಕಗಳು ಮತ್ತು ಗ್ರಂಥಾಲಯವನ್ನು ಒಳಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ, ಭಾರತೀಯ ಸೇನಾ ಬ್ಯಾಂಡ್ ‘ವಂದೇ ಮರತಂ’ ಸೇರಿದಂತೆ ಹಲವಾರು ದೇಶಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು.