ಚಮೋಲಿ (ಉತ್ತರಾಖಂಡ) ಇಲ್ಲಿನ ಘಟನೆ
ಚಮೋಲಿ (ಉತ್ತರಾಖಂಡ) – ಇಲ್ಲಿನ ನಂದನಗರನಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಆರಿಫನು ಅಪ್ರಾಪ್ತ ಹಿಂದೂ ಹುಡುಗಿಗೆ ಅಶ್ಲೀಲ ಸನ್ನೆ ಮಾಡಿದ ಆರೋಪದಲ್ಲಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆಕ್ರೋಶಗೊಂಡ ಗುಂಪು ಪ್ರತಿಭಟನೆ ನಡೆಸಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಆರಿಫ್ ಪರಾರಿಯಾಗಿದ್ದು, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.
ದೂರಿನಲ್ಲಿ ಹುಡುಗಿಯ ಪೋಷಕರು, ಸಲೂನ ನಡೆಸುವ 24 ವರ್ಷದ ಆರಿಫನು ಅನೇಕ ದಿನಗಳಿಂದ ಸಂತ್ರಸ್ಥೆಗೆ ಅಶ್ಲೀಲ ಸನ್ನೆ ಮಾಡುತ್ತಿದ್ದನು. ಮೊದಲು ಸಂತ್ರಸ್ಥೆಯು ಈ ಕೃತ್ಯವನ್ನು ನಿರ್ಲಕ್ಷಿಸಿದಳು. ಕೆಲವು ದಿನಗಳ ನಂತರ ಆರಿಫ ಮತ್ತೊಮ್ಮೆ ಸಂತ್ರಸ್ಥೆಗೆ ಅಶ್ಲೀಲ ಸನ್ನೆ ಮಾಡಿದನು. ಆಗ ಸಂತ್ರಸ್ಥೆಯು ತಾಯಿಗೆ ತಿಳಿಸಿದಳು. ತದನಂತರ ಹುಡುಗಿಯ ತಂದೆ ಪೊಲೀಸರಲ್ಲಿ ದೂರು ದಾಖಲಿಸಿ, ಆರೋಪಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.
ಹಿಂದೂ ಸಂಘಟನೆಗಳ ಸದಸ್ಯರ ಸಹಿತ ಸ್ಥಳೀಯ ಜನರಿಗೂ ಇದರ ಮಾಹಿತಿ ಸಿಕ್ಕಿತು. ಈ ಘಟನೆಯನ್ನು ನಿಷೇಧಿಸಲು ಜನರು ಪ್ರತಿಭಟನೆ ನಡೆಸಿದರು ಮತ್ತು ನಂತರ ಆರಿಫನ ಅಂಗಡಿಯನ್ನು ಧ್ವಂಸಗೊಳಿಸಿದರು.
ಸಂಪಾದಕೀಯ ನಿಲುವು‘ಇಂತಹ ಕಾಮುಕರ ಮೇಲೆ ತಕ್ಷಣವೇ ಹಾಗೂ ಕಠಿಣ ಶಿಕ್ಷೆಯಾಗದಿರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದರೆ, ಅದಕ್ಕೆ ಪೊಲೀಸರು, ಆಡಳಿತ, ಸರಕಾರ ಮತ್ತು ನ್ಯಾಯವ್ಯಮವಸ್ಥೆಯೇ ಜವಾಬ್ದಾರಿಯಾಗಿದೆ’, ಎಂದು ಯಾರಾದರೂ ಹೇಳಿದರೆ ಅದರಲ್ಲಿ ಆಶ್ಚರ್ಯವೇನಿದೆ ? |