ನವ ದೆಹಲಿ – ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ವಕ್ಫ್ ಬೋರ್ಡ್ ಸುಧಾರಣಾ ವಿಧೇಯಕ, ೨೦೨೪ ಸಂದರ್ಭದಲ್ಲಿ ೭ ಸದಸ್ಯರ ತಂಡ ಸ್ಥಾಪಿಸಿದೆ. ಈ ತಂಡದಲ್ಲಿ ಉತ್ತರಾಖಂಡ, ಮಧ್ಯಪ್ರದೇಶ, ಹರಿಯಾಣ, ಗುಜರಾತ ಮತ್ತು ಹಿಮಾಚಲಪ್ರದೇಶ ಇವರ ವಕ್ಫ್ ಬೋರ್ಡ್ ನ ಅಧ್ಯಕ್ಷರು ಮತ್ತು ಭಾಜಪ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯ ೨ ಸದಸ್ಯರ ಸಮಾವೇಶ ಇದೆ.
ಈ ತಂಡ ವಿವಿಧ ರಾಜ್ಯಕ್ಕೆ ಹೋಗಿ ಮುಸಲ್ಮಾನ ಅಧ್ಯಯನಕಾರರ ಜೊತೆಗೆ ಚರ್ಚಿಸುವರು. ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವರು ಮತ್ತು ಮಸೂದೆಯ ಕುರಿತು ಸೂಚನೆಗಳನ್ನು ಸಂಗ್ರಹಿಸುವರು. ಹಾಗೂ ಅವರು ವಕ್ಫ್ ಬೋರ್ಡ್ ಸುಧಾರಣಾ ವಿಷಯದ ಕುರಿತು ಅಗತ್ಯ ಮತ್ತು ಅದರ ಲಾಭದ ಕುರಿತು ಅವರಿಗೆ ತಿಳಿಸಿ ಹೇಳುವರು.
೧. ಈ ಕುರಿತು ಲೋಕಸಭಾ ಸಂಸದ ಜಗದಂಬಿಕಾ ಪಾಲ್ ಇವರ ಅಧ್ಯಕ್ಷತೆಯಲ್ಲಿ ಒಂದು ೩೧ ಸದಸ್ಯರ ಸಂಯುಕ್ತ ಸಂಸದೀಯ ಸಮಿತಿ (ಜೆಪಿಸಿ) ಸ್ಥಾಪಿಸಲಾಗಿದೆ. ಈ ಸಮಿತಿಯಲ್ಲಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರಿದ್ದಾರೆ.
೨. ಸಮಿತಿಯ ಮೊದಲ ಸಭೆ ಆಗಸ್ಟ್ ೨೨ ರಂದು ನಡೆದಿದೆ. ಎರಡನೆಯ ಸಭೆ ಆಗಸ್ಟ್ ೩೦ ರಂದು ನವದೆಹಲಿಯಲ್ಲಿ ನಡೆದಿದೆ. ಸಭೆಯ ನಂತರ ಸಮಿತಿಯು ಜನರ ಅಭಿಪ್ರಾಯ ಮತ್ತು ಸೂಚನೆ ಕೇಳಿದ್ದಾರೆ. ಅದಕ್ಕಾಗಿ ೧೫ ದಿನಗಳ ಕಾಲಾವಕಾಶ ನೀಡಲಾಗಿದೆ. ವಕ್ಫ್ ಬೋರ್ಡ್ ಸುಧಾರಣಾ ಮಸೂದೆಯ ಕುರಿತು ‘ಜೆಪಿಸಿ’ಯ ಮುಂದಿನ ಸಭೆ ಸಪ್ಟೆಂಬರ್ ೫ ಮತ್ತು ೬ ರಂದು ನಡೆಯಲಿದೆ.
೩. ಸಂಸದೀಯ ಕಾರ್ಯಕ್ರಮ ಮತ್ತು ಅಲ್ಪಸಂಖ್ಯಾತ ವ್ಯವಹಾರ ಸಚಿವ ಕಿರಣ್ ರಿಜೀಜೂ ಇವರು ಆಗಸ್ಟ್ ೮ ರಂದು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ಸುಧಾರಣಾ ಮಸೂದೆ ೨೦೨೪ ಮಂಡಿಸಿದ್ದರು. ವಿರೋಧ ಪಕ್ಷದ ವಿರೋಧದಿಂದ ಈ ಮಸೂದೆ ಲೋಕಸಭೆಯಲ್ಲಿ ಯಾವುದೇ ಚರ್ಚೆ ನಡೆಯದೆ ‘ಜೆಪಿಸಿ’ ಕಡೆಗೆ ಕಳಿಸಲಾಗಿತ್ತು.