ಹಿಂದೂಗಳಿಂದ `ನಗರ ಬಂದ್’ ಚಳವಳಿ
ಚುರು (ರಾಜಸ್ಥಾನ) – ಸರದಾರ ನಗರದಲ್ಲಿ ಆಗಸ್ಟ್ 30 ರ ಸಂಜೆ ಹಿಂದೂಗಳಿಂದ ನಡೆಸಲಾದ ಧಾರ್ಮಿಕ ಮೆರವಣಿಗೆ ಮಸೀದಿಯ ಹತ್ತಿರ ತಲುಪಿದಾಗ ಡಿ.ಜೆ. ಹಾಕಿದ್ದರಿಂದ ವಾಗ್ವಾದ ನಡೆದು ಮುಸಲ್ಮಾನರು ಮೆರವಣಿಗೆಯ ಮೇಲೆ ದಾಳಿ ನಡೆಸಿದರು.
ರಾಮದೇವರಾ ಸಂಘಟನೆಯಿಂದ ಈ ಮೆರವಣಿಗೆಯನ್ನು ಕೈಕೊಳ್ಳಲಾಗಿತ್ತು. ಇಲ್ಲಿನ ತೆಲಿಯೊ ಮಸೀದಿಯ ಹತ್ತಿರ ಮೆರವಣಿಗೆ ತಲುಪಿದಾಗ ಮುಸಲ್ಮಾನರು ಮೆರವಣಿಗೆಯನ್ನು ಸುತ್ತುವರಿದರು ಮತ್ತು ಮಸೀದಿಯ ಎದುರಿಗೆ ಡಿ.ಜೆ. ಬಂದ್ ಮಾಡಲು ಹೇಳಿದರು. ಈ ಸಮಯದಲ್ಲಿ ಸಂಘಟನೆಯ ಪದಾಧಿಕಾರಿಗಳು ಮುಸಲ್ಮಾನರಿಗೆ ತಿಳಿಸಲು ಪ್ರಯತ್ನಿಸಿದಾಗ ಮುಸಲ್ಮಾನರು ಧ್ವಂಸಗೊಳಿಸಲು ಮತ್ತು ಹಲ್ಲೆ ಮಾಡಲು ಪ್ರಾರಂಭಿಸಿದರು.
ಈ ಘಟನೆಯನ್ನು ನಿಷೇಧಿಸಿ ತಡರಾತ್ರಿಯವರೆಗೆ ಸರದಾರ ನಗರ ಪೊಲೀಸ ಠಾಣೆಯ ಎದುರಿಗೆ ದೊಡ್ಡ ಗುಂಪು ಜಮಾಯಿಸಿತ್ತು ಮತ್ತು ಅವರು ಟೈರ್‌ಗಳನ್ನು ಸುಟ್ಟು ಪ್ರತಿಭಟನೆಯನ್ನು ಮಾಡಿದರು. ಇದಾದ ಬಳಿಕ ಜಿಲ್ಲಾಧಿಕಾರಿ ಮೀನು ವರ್ಮಾ, ಪೊಲೀಸ್ ಅಧೀಕ್ಷಕರಾದ ಅನಿಲ ಕುಮಾರ ಮಹೇಶ್ವರಿ ಹಾಗೂ ಪೊಲೀಸ ಅಧಿಕಾರಿ ಅರವಿಂದ ಕುಮಾರ ಭಾರದ್ವಾಜ ಅವರು ಹಿಂದೂ ಸಂಘಟನೆ ಹಾಗೂ ನಗರದ ಹಿರಿಯ ನಾಗರಿಕರೊಂದಿಗೆ ಸಭೆ ನಡೆಸಿದರು. ಈ ಹಲ್ಲೆ ಪ್ರಕರಣದಲ್ಲಿ 3 ಮಂದಿಯನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿ, ಇತರೆ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಹಿಂದೂಗಳು ಆಗಸ್ಟ್ 31 ರಂದು ‘ನಗರ ಬಂದ್’ ಮಾಡಲು ಕರೆ ನೀಡಿದರು. ಈ ಬಂದ್ ಗೆ ಜನರಿಂದ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರಸಭೆಯ ಸ್ವಚ್ಛತಾ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಮಾಡದಿರಲು ನಿರ್ಧರಿಸಿದರು. ನಗರಸಭೆ ಎದುರು ಧರಣಿ ಆಂದೋಲನ ನಡೆಸಿದರು.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಭಾಜಪ ರಾಜ್ಯವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ ! |