ವಕ್ಫ್ ಬೋರ್ಡ್ ಕಾನೂನು ಸುಧಾರಣೆ ಮಸೂದೆಗೆ ಕರ್ನಾಟಕ ವಕ್ಫ್ ಬೋರ್ಡ್ ನಿಂದ ವಿರೋಧ

ಬೆಂಗಳೂರು – ಕೇಂದ್ರ ಸರಕಾರದ ವಕ್ಫ್ ಬೋರ್ಡ್ ಕಾನೂನಿನಲ್ಲಿ ಸುಧಾರಣೆ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸಿದ ನಂತರ ಅದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು. ಅದರ ನಂತರ ಈ ಮಸೂದೆಯನ್ನು ಸಂಯುಕ್ತ ಸಂಸದೀಯ ಸಮಿತಿಯ ಬಳಿ ಚರ್ಚೆಗಾಗಿ ಕಳುಹಿಸಲಾಗಿದೆ. ಈ ಕಾನೂನಿಗೆ ದೇಶದಲ್ಲಿನ ವಿವಿಧ ವಕ್ಫ್ ಮಂಡಳಿಯಿಂದ ವಿರೋಧ ವ್ಯಕ್ತಪಡಿಸಲಾಗಿದೆ. ‘ಯಾವುದೇ ಪರಿಸ್ಥಿತಿಯಲ್ಲಿ ಈ ಕಾನೂನಿಗೆ ನಾವು ಬೆಂಬಲಿಸುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಮತ್ತು ರಾಜ್ಯ ವಕ್ಫ್ ಬೋರ್ಡ್ ನ ಅಧ್ಯಕ್ಷ ಅನ್ವರ ಭಾಷಾ ಇವರ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ವಕ್ಫ್ ಬೋರ್ಡ್ ನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕಾನೂನಿನ ವಿರುದ್ಧ ಠರಾವು ಸಮ್ಮತಿಸಿಲಾಗಿದ್ದು ಅದರ ಪ್ರತಿ(ನಮೂನೆಯನ್ನು) ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ನೀಡಲಾಗಿದೆ.

ವಕ್ಫ್ ಸುಧಾರಣಾ ಕಾನೂನಿಗೆ ವಿರೋಧಿಸಲು ಕೇಂದ್ರಕ್ಕೆ ಪತ್ರ ಬರೆಯಬೇಕು, ಎಂದು ಶಿಷ್ಟ ಮಂಡಳದಿಂದ ವಿನಂತಿಸಲಾಗಿದೆ. ಕೇಂದ್ರ ಸರಕಾರವು ಸ್ಥಾಪಿಸಿರುವ ಸಂಯುಕ್ತ ಸಂಸದೀಯ ಸಮಿತಿಗೂ ಯಾವುದೇ ಮಾಹಿತಿ ನೀಡುವುದಿಲ್ಲ. ನಮ್ಮದು ಸ್ವಾಯತ್ತ ಸಂಸ್ಥೆ ಆಗಿದ್ದು ಪ್ರಸ್ತಾವಿತ ಸುಧಾರಣಾ ಕಾನೂನು ಜನಾಂಗದ ಹಿತದ ವಿರುದ್ಧವಾಗಿದೆ. ಮುಂಬರುವ ಅಧಿವೇಶನದಲ್ಲಿ ರಾಜ್ಯ ಸರಕಾರವು ನಿಷೇಧದ ಠರಾವು ಸಮ್ಮತಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕೆಂದು ಶಿಷ್ಠ ಮಂಡಳಿ ಆಗ್ರಹಿಸಿದೆ.

ಸಂಪಾದಕೀಯ ನಿಲುವು

ಈ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಇದನ್ನು ರದ್ದು ಗೊಳಿಸುವುದೇ ಆವಶ್ಯಕವಾಗಿದೆ !