ಜಾಗತಿಕ ತಾಪಾಮಾನದ ಹೆಚ್ಚಳ ಅಥವಾ ಹಿಮಾಲಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಿಕಾಸ ಕಾರ್ಯಗಳೇ ಇದಕ್ಕೆ ಕಾರಣ ಎಂದು ಆರೋಪ !
ಡೆಹರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿನ ಪಿಥೋರಾಗಡ್ ನ ಧಾರಚುಲಾ ತಾಲೂಕಿನಲ್ಲಿರುವ ವ್ಯಾಸ ಕಣಿವೆಯಲ್ಲಿ ಓಂ ಪರ್ವತವಿದೆ. ೫, ೯೦೦ ಮೀಟರ್ ಎತ್ತರದ ಈ ಪರ್ವತದ ವೈಶಿಷ್ಟ್ಯವೆಂದರೆ, ಈ ಪರ್ವತದ ಮೇಲೆ ‘ಓಂ’ ಅಕ್ಷರದ ಮನಮೋಹಕ ಆಕೃತಿ ಕಾಣುತ್ತದೆ. ಕಳೆದ ಸಾವಿರಾರು ವರ್ಷಗಳಿಂದ ಈ ಪರ್ವತವಿದೆ ಎಂದು ನಂಬಲಾಗಿದೆ. ಶ್ವೇತ ಹಿಮದಿಂದ ಕೂಡಿರುವ ಪರ್ವತದಲ್ಲಿನ ಈ ಓಂ ಚಿಹ್ನೆ ಕೋಟ್ಯಾಂತರ ಹಿಂದುಗಳ ಶ್ರದ್ಧೆಯ ಕೇಂದ್ರವಾಗಿದ್ದು ಈ ಬಾರಿ ಜಾಗತಿಕ ತಾಪಮಾನ ಹೆಚ್ಚಿರುವುದರಿಂದ ಪರ್ವತದ ಮೇಲಿನ ಹಿಮ ಹೆಚ್ಚು ಪ್ರಮಾಣದಲ್ಲಿ ಕರಗಿರುವುದರಿಂದ ಓಂ ಆಕೃತಿ ಕಣ್ಮರೆಯಾಗಿದೆ.
೧. ಪರಿಸರವಾದಿಗಳು ಮತ್ತು ಸ್ಥಳೀಯರ ಪ್ರಕಾರ ನೈಸರ್ಗಿಕ ಕಾರಣದಿಂದಾಗಿ ಈ ಬದಲಾವಣೆ ಆಗಿದೆ. ಹಿಮಾಲಯದ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಕಾಸ ಕಾರ್ಯಗಳಿಂದಾಗಿ ಈ ರೀತಿ ಆಗಿದೆ. ಕೆಲ ಸ್ಥಳೀಯರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಮಾಡಿದ್ದಾರೆ.
೨. ಈ ಘಟನೆಯ ವಿಚಾರಣೆ ನಡೆಸುವಂತೆ ಶ್ರದ್ಧಾಳುಗಳು ಆಗ್ರಹಿಸಿದ್ದಾರೆ. ಸರಕಾರವು ಈ ಘಟನೆಯ ವಿಚಾರಣೆ ನಡೆಸುತ್ತಿದೆ. ಪರ್ವತದ ಮೇಲೆ ಮತ್ತೆ ಓಂ ಮೂಡುವಂತೆ ಗಮನ ಹರಿಸಲಾಗುತ್ತಿದೆ.
೩. ಹೊಸ ಋತುವಿನಲ್ಲಿ ಮತ್ತೆ ಹಿಮ ಬಿದ್ದು ಪರ್ವತದ ಮೇಲೆ ‘ಓಂ’ ಮೂಡುವುದೆಂದು ಅಲ್ಲಿನ ಜನರ ವಿಶ್ವಾಸವಾಗಿದೆ.
೪. ಕೈಲಾಸ ಮಾನಸ ಸರೋವರದ ಯಾತ್ರೆಯ ವೇಳೆ ನಾಭಿಢಾಂಗದಿಂದ ಈ ಪರ್ವತ ಭಕ್ತರಿಗೆ ತನ್ನ ದರ್ಶನ ನೀಡುತ್ತದೆ.
ಸಂಪಾದಕೀಯ ನಿಲುವುಈ ಎರಡೂ ಆರೋಪಗಳು ಸತ್ಯವಾಗಿರಬಹುದು. ಯಾಕೆಂದರೆ ಈ ಎರಡು ಆರೋಪಗಳಲ್ಲಿ ಮನುಷ್ಯನ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂಬುದು ತಿಳಿಯುತ್ತದೆ. ಸಂಕ್ಷಿಪ್ತವಾಗಿ, ವೈಜ್ಞಾನಿಕ ವಿಕಾಸದಿಂದ ಹಿಂದೂ ಧರ್ಮದ ಅಂದರೆ ಮನುಷ್ಯನ ಹಾನಿ ಹೇಗಾಗುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ ! |