ಡೆಹರಾಡೂನ್ (ಉತ್ತರಖಂಡ): ರಾಮಗಿರಿ ಮಹಾರಾಜರ ವಿರುದ್ಧ ಮುಸಲ್ಮಾನರಿಂದ ಪ್ರತಿಭಟನೆ

ಮಹಾರಾಜರನ್ನು ಬಂಧಿಸುವ ಜೊತೆಗೆ ಧರ್ಮ ನಿಂದನೆಯ ವಿರುದ್ಧ ಕಾನೂನು ರೂಪಿಸಲು ಆಗ್ರಹ

ಡೆಹರಾಡೂನ್ (ಉತ್ತರಾಖಂಡ) – ಮಹಾರಾಷ್ಟ್ರದಲ್ಲಿನ ನಾಶಿಕದ ಕಾರ್ಯಕ್ರಮವೊಂದರಲ್ಲಿ ರಾಮಗಿರಿ ಮಹಾರಾಜರು ಮಹಮ್ಮದ್ ಪೈಗಂಬರ್ ರನ್ನು ಅವಮಾನ ಮಾಡಿದ್ದಾರೆಂದು ಮುಸಲ್ಮಾನರಿಂದ ಆರೋಪಿಸಲಾಗಿದ್ದು ನೂರಾರು ಮುಸಲ್ಮಾನರು ರಾಮಗಿರಿ ಮಹಾರಾಜರ ವಿರುದ್ಧ ಪ್ರತಿಭಟನೆ ನಡೆಸಿದರು. ರಾಮಗಿರಿ ಮಹಾರಾಜರನ್ನು ಬಂಧಿಸಿ ಜೈಲಿಗೆ ಹಾಕಬೇಕೆಂದು ಒತ್ತಾಯಿಸಿದರು ಹಾಗೂ ಭಾರತದಲ್ಲಿ ಧರ್ಮ ನಿಂದನೆಯ ವಿರುದ್ಧ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ಮುಸಲ್ಮಾನರು ಮೂರು ತಿಂಗಳ ಅವಧಿ ನೀಡಿದ್ದಾರೆ. ಈ ಸಮಯ ಮಿತಿಯಲ್ಲಿ ಕಾನೂನು ಜಾರಿಗೊಳಿಸದಿದ್ದರೆ, ಏನಾದರೂ ಮಾಡಲಾಗುವುದೆಂದು ಬೆದರಿಕೆ ಕೂಡ ಹಾಕಲಾಯಿತು. ಮಹಾರಾಷ್ಟ್ರದಲ್ಲಿನ ಕೆಲವು ಸ್ಥಳಗಳಲ್ಲಿ ಮುಸಲ್ಮಾನರು ಈ ಹಿಂದೆಯೂ ರಾಮಗಿರಿ ಮಹಾರಾಜರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಡೆಹರಾಡೂನ್ ಪರೇಡ್ ಗ್ರೌಂಡಲ್ಲಿ ಮುಸಲ್ಮಾನರಿಂದ ಈ ಪ್ರತಿಭಟನೆ ನಡೆಸಲಾಗಿತ್ತು. ಮುಸಲ್ಮಾನ ಸೇವಾ ಸಂಘಟನೆ, ಜಮೀಯತ್ ಉಲೇಮ-ಎ-ಹಿಂದ್ ಮತ್ತು ಇಮಾಮ್-ಎ-ರಿಸಾಲತ್ ಸಂಘಟನೆಗಳಿಂದ ಈ ಪ್ರತಿಭಟನೆಯ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಶಾನ್-ಎ-ರಿಸಾಲತ್ ಎಂದು ಹೆಸರಿಸಲಾಗಿತ್ತು. ಇದರಲ್ಲಿ ಉತ್ತರಾಖಂಡದ ಅನೇಕ ಮೌಲಾನಾ ಮತ್ತು ಮುಫ್ತಿಗಳು ಇದರಲ್ಲಿ ಸಹಭಾಗಿಯಾಗಿದ್ದರು.

ಸಂಪಾದಕೀಯ ನಿಲುವು

ತಮ್ಮ ಧಾರ್ಮಿಕ ಶ್ರದ್ಧೆಯ ಕಥಿತ ಅವಮಾನವಾಗಿದೆ ಎಂದು ದೇಶಾದ್ಯಂತ ಸಂಘಟಿತರಾಗಿ ಪ್ರತಿಭಟನೆ ನಡೆಸುವ ಮುಸಲ್ಮಾನರಿಂದ ಹಿಂದುಗಳು ಏನಾದರೂ ಕಲಿಯುವರೆ ?