ಭಿಲವಾಡಾ(ರಾಜಸ್ಥಾನ): ದೇವಸ್ಥಾನದ ಹೊರಗೆ ಹಸುವಿನ ಬಾಲವನ್ನು ಎಸೆದ ಕಿಡಿಗೇಡಿಗಳು

  • ನಗರದಲ್ಲಿ ಹಿಂದೂಗಳಿಂದ ಉಪವಾಸ ಮುಷ್ಕರದ ಮೂಲಕ ಪ್ರತಿಭಟನೆ

  • ಪೊಲೀಸರಿಂದ ಲಾಠಿಚಾರ್ಜ್

ಭಿಲವಾಡಾ(ರಾಜಸ್ಥಾನ) – ದೇವಸ್ಥಾನವೊಂದರ ಹೊರಗೆ ಆಗಸ್ಟ್ ೨೫ ರಂದು ಹಸುವಿನ ಕತ್ತರಿಸಿರುವ ಬಾಲ ದೊರಕಿರುವುದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನೆರೆದ ಜನರು ಅಂಗಡಿಗಳ ಮೇಲೆ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಗುಂಪನ್ನು ನಿಯಂತ್ರಿಸಲು ಪೊಲೀಸರು ಎರಡು ಬಾರಿ ಲಾಠಿಚಾರ್ಜ್ ನಡೆಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲವು ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಕಾರ್ಯಾಲಯದ ಎದುರು ಉಪವಾಸ ಮುಷ್ಕರಕ್ಕೆ ಕುಳಿತರು . ನೂರಾರು ಜನರು ಈ ಕಾರ್ಯಾಲಯದೆಡೆಗೆ ಹೋಗಲು ಪ್ರಯತ್ನಿಸಿದರು. ಎಲ್ಲಿಯವರೆಗೆ ಅಪರಾಧಿಗಳ ಮನೆಗಳನ್ನು ನೆಲೆಸಮ ಮಾಡುವುದಿಲ್ಲವೋ ಅಲ್ಲಿಯವರೆಗೆ ನಾವು ಉಪವಾಸ ಮುಷ್ಕರ ಬಿಡುವುದಿಲ್ಲ, ಎಂದು ಕಾರ್ಯಕರ್ತರು ಆಗ್ರಹಿಸಿದರು. ಆರೋಪಿಗಳನ್ನು ೧೨ ಗಂಟೆಗಳೊಳಗೆ ಬಂಧಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಕೂಡ ಘೋಷಿಸಿದರು.

೧. ಹರಿ ಸೇವೆ ಧಾಮದ ಮಹಂತರಾದ ಮಹಾಮಂಡಲೇಶ್ವರ ಹಂಸರಾಮ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಮಾಜ ಕಂಟಕರು ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಹೊರಗೆ ಹಾಕಿದ್ದಾರೆ. ಅವರು ನಗರ ಮತ್ತು ರಾಜ್ಯದಲ್ಲಿ ಅಶಾಂತಿ ಹಬ್ಬಿಸಲು ಯತ್ನಿಸುತ್ತಿದ್ದಾರೆ. ಸರಕಾರದ ಗಮನ ಈ ಕಡೆ ಇಲ್ಲ. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಿಲ್ಲ. ಸರಕಾರ ಹಿಂದೂ ಸಮಾಜವನ್ನು ಶಾಂತಗೊಳಿಸುವಲ್ಲಿ ತೊಡಗಿದೆ; ಆದರೆ ಈಗ ಹಿಂದೂ ಸಮಾಜ ಜಾಗೃತವಾಗಿದ್ದು ಈ ಘಟನೆಯಿಂದ ಸಂಪೂರ್ಣ ಹಿಂದೂ ಸಮಾಜ ಒಗ್ಗೂಡಿದೆ. ಎಲ್ಲಿಯವರೆಗೆ ಈ ಸಮಾಜ ಕಂಟಕರನ್ನು ಬಂಧಿಸುವುದಿಲ್ಲವೋ ಅಲ್ಲಿಯವರೆಗೆ ಭಿಲವಾಡಾ ಬಂದ್ ಇರುವುದು ಎಂದು ಅವರು ಹೇಳಿದರು .

೨. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತೀಯ ಸೇವಾ ಪ್ರಮುಖ ರವಿ ಜಾಜು ಅವರು ರಾಜಸ್ಥಾನದ ಮುಖ್ಯಮಂತ್ರಿ ಭಜನಲಾಲ ಶರ್ಮ ಅವರು ಕೂಡ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಆರೋಪಿಗಳನ್ನು ಕಾನೂನು ಮಾರ್ಗವಾಗಿ ಅವರ ಅಕ್ರಮ ಸಂಪತ್ತನ್ನು ನಾಶಗೊಳಿಸಬೇಕೆಂದು ಆಗ್ರಹಿಸಿದರು.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಕೃತ್ಯ ಮಾಡುವ ಧೈರ್ಯ ಜಿಹಾದಿಗಳಿಗೆ ಹೇಗೆ ಬರುತ್ತದೆ ? ಪೊಲೀಸರು ಈ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !