ನಾಶಿಕನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿ ತಯಾರಿಸುವ ೭ ಶಿಲ್ಪಿಗಳ ವಿರುದ್ಧ ಕ್ರಮ !

ನಾಶಿಕ್ – ಇಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣೇಶ ಮೂರ್ತಿಗಳು ತಯಾರಿಸಿದ್ದಾರೆ ಎಂದು ೭ ಶಿಲ್ಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವರಿಂದ ತಲಾ ೧೦ ಸಾವಿರದಂಡ ವಸೂಲಿ ಮಾಡಲಾಗಿದೆ. ನಾಶಿಕ ಮಹಾನಗರ ಪಾಲಿಕೆಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿ ತಯಾರಿಸುವ ಶಿಲ್ಪಿಗಳ ಮೇಲೆ ಕ್ರಮ ಕೈಗೊಳ್ಳುವುದು ಆರಂಭಿಸಿದ್ದಾರೆ. ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು, ಇದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ನಾಗಪುರ ಮಹಾನಗರ ಪಾಲಿಕೆ ಕೂಡ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿ ತಯಾರಿಸಿದರೆ ೧೦ ಸಾವಿರ ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

  • ಮಾಲಿನ್ಯ ವಿಷಯದ ಕುರಿತು ಇಷ್ಟೊಂದು ಜಾಗರೂಕರಾಗಿರುವ ಮಹಾನಗರಪಾಲಿಕೆ ಇತರ ಧರ್ಮದ ಹಬ್ಬಗಳ ಸಮಯದಲ್ಲಿ ಹಾಗೂ ಕಾರಖಾನೆಗಳಿಂದ ನದಿಗೆ ಹರಿಸುವ ಎಲ್ಲಾ ಮಾಲಿನ್ಯ ತಡೆಯುವುದಕ್ಕಾಗಿ ನೇತೃತ್ವ ಏಕೆ ತೆಗೆದುಕೊಳ್ಳುವುದಿಲ್ಲ ?
  • ಶಿಲ್ಪಿಗಳಿಗೆ ಜೇಡಿ ಮಣ್ಣು ಸಾಕಷ್ಟು ಪ್ರಮಾಣದಲ್ಲಿ ಒದಗಿಸದೇ ಶಿಲ್ಪಿಗಳ ಮೇಲೆ ನೇರ ಕ್ರಮ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ ?