ಅಸ್ಸಾಂ: ಮುಸ್ಲಿಮರಿಗೆ ಮದುವೆ ಮತ್ತು ವಿಚ್ಛೇದನದ ನೋಂದಣಿ ಕಡ್ಡಾಯ !

ಸರಕಾರದಿಂದ ಮಸೂದೆ

ಗುವಾಹಾಟಿ(ಅಸ್ಸಾಂ) – ಅಸ್ಸಾಂ ರಾಜ್ಯದಲ್ಲಿ, ಮುಸ್ಲಿಮರು ಮದುವೆ ಮತ್ತು ವಿಚ್ಛೇದನಗಳನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಈ ಹಿಂದೆ, ಮುಸ್ಲಿಂ ವಿವಾಹಗಳನ್ನು ಖಾಜಿಗಳ (ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞ ಮತ್ತು ನ್ಯಾಯಾಧೀಶರು) ಮೂಲಕ ನೋಂದಾಯಿಸಲಾಗುತ್ತಿತ್ತು; ಆದರೆ, ಈ ಹೊಸ ಮಸೂದೆಯಿಂದಾಗಿ ಮುಸ್ಲಿಮರ ಎಲ್ಲಾ ವಿವಾಹಗಳು ಸರಕಾರದ ಅಡಿಯಲ್ಲಿ ನೋಂದಣಿಯಾಗಲಿವೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ತಿಳಿಸಿದ್ದಾರೆ.

ಸರಮಾ ಅವರು ಈ ಬಗ್ಗೆ ಮಾತನಾಡಿ, ಈ ಹಿಂದೆ ಖಾಜಿಗಳು ಅಪ್ರಾಪ್ತ ಬಾಲಕಿಯರ ವಿವಾಹಗಳನ್ನು ಕೂಡ ನೋಂದಾಯಿಸುತ್ತಿದ್ದರು; ಆದರೆ ಈ ಮಸೂದೆಯಲ್ಲಿ ಅದನ್ನು ನಿರ್ಬಂಧಿಸಲಾಗುವುದು. ಇನ್ನು ಮುಂದೆ ಯಾವುದೇ ಅಪ್ರಾಪ್ತ ಬಾಲಕಿಯ ವಿವಾಹವನ್ನು ನೋಂದಣಿ ಮಾಡಲಾಗುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಕಾನೂನನ್ನು ಇಡೀ ದೇಶದಲ್ಲಿ ಏಕೆ ಜಾರಿಗೊಳಿಸುತ್ತಿಲ್ಲ?