ಮುಂಬಯಿ – ನಮ್ಮ ಹಿಂದುತ್ವ ಸನಾತನ ಮತ್ತು ಅದು ಸತ್ಯವನ್ನು ಆಧರಿಸಿದೆ. ‘ನಮ್ಮ ಮುಖ್ಯಮಂತ್ರಿ ಬಂದರೆ ಹಿಂದುತ್ವದ ಕೆಲಸ ಮಾಡುತ್ತೇವೆ’ ಎನ್ನುವ ರಾಜಕೀಯ ಹಿಂದುತ್ವವಾದಿಗಳಿಗೆ ತಮ್ಮ ಹುದ್ದೆಯ ವರದಾನವಾಗಲಿ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ; ಆದರೆ ನಾವು ಹಿಂದುತ್ವದ ರಕ್ಷಣೆಗಾಗಿ ಅಖಂಡವಾಗಿ ಕಾರ್ಯ ಮಾಡುವುದನ್ನು ಮುಂದುವರಿಸುತ್ತೇವೆ. ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮುಂಬಯಿ ಹೈಕೋರ್ಟ್‌ನ ನ್ಯಾಯವಾದಿ ಸಂಜೀವ್ ಪುನಾಳೆಕರ್ ಹೇಳಿದ್ದಾರೆ. ಅವರು ಆಗಸ್ಟ್ 20 ರಂದು ಸನಾತನ ಸಂಸ್ಥೆಯ ವತಿಯಿಂದ ದಾದರ್ (ಪಶ್ಚಿಮ)ದ ಕಿತ್ತೆ ಭಂಡಾರಿ ಸಭಾಂಗಣದಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲವಾದ ?’(ಅಂಧಶ್ರದ್ಧಾ ನಿರ್ಮೂನಲವೋ ತೆರೆಮೇಲಿನ ಅರ್ಬನ್ ನಕ್ಸಲಿಗರೋ) ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿಡುತ್ತಿದ್ದರು. ಈ ವೇಳೆ ವ್ಯಾಸಪೀಠದ ಮೇಲೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಮತ್ತು ಖ್ಯಾತ ಶಸ್ತ್ರಚಿಕಿತ್ಸಕ (ಶಸ್ತ್ರಚಿಕಿತ್ಸಕ) ಡಾ. ಅಮಿತ್ ಥಢಾನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಜೀವ್ ಪುನಾಳೆಕರ್ ಮಾತನಾಡಿ, ‘ಹಿಂದುತ್ವದ ಕಾರ್ಯ ಮಾಡುವಾಗ ಯಾವ ಹಿಂದೂ ರಾಷ್ಟ್ರಕ್ಕೆ ವಿರೋಧವಿದೆಯೋ ಅವರು ನಮಗೆ ವಿರೋಧ ಮಾಡುತ್ತಲೇ ಇದ್ದಾರೆ ಹಾಗೂ ಹಿಂದುತ್ವದ ರಾಜಕೀಯ ಇರುವವರೂ ಸಹ ನಮ್ಮನ್ನು ವಿರೋಧಿಸುತ್ತಿದ್ದಾರೆ. ನವಾಬ್ ಮಲಿಕ್ ಇವರು ಅಜಿತ್ ಪವಾರ್ ಜೊತೆ ತಿರುಗಾಡುತ್ತಿದ್ದಾರೆ; ಆದರೆ ರಾಜಕೀಯ ಹಿಂದೂಗಳಾಗಿರುವವರು ಇದರ ಬಗ್ಗೆ ಮಾತನಾಡಲು ಸಿದ್ಧರಿಲ್ಲ. ಪ್ರಜಾಪ್ರಭುತ್ವ ವಿಫಲವಾಗಿದೆ. ಜಿಹಾದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಜಿಹಾದಿಗಳು ಹಿಂದೂಗಳ ಮೇಲೆ ದಾಳಿ ಮಾಡಿದಾಗ, ನಾವು ಅವರೊಂದಿಗೆ ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಿಲ್ಲ. ಆಗ ‘ನಮ್ಮ ಪ್ರಜಾಪ್ರಭುತ್ವ ದೊಡ್ಡದು, ಸಂವಿಧಾನವೇ ಶ್ರೇಷ್ಠ’ ಎಂದು ಹೇಳಿದರೂ ಪ್ರಯೋಜನವಿಲ್ಲ. ಬೀದಿಗಿಳಿದು ಆಕ್ರಮಣಕಾರರ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಿಂದೂಗಳು ಅದೇ ರೀತಿಯಲ್ಲಿ ಹೋರಾಡಬೇಕಾಗುತ್ತದೆ. ಇದಕ್ಕಾಗಿ ಹಿಂದೂಗಳನ್ನು ಸಿದ್ಧಪಡಿಸಬೇಕು. ಪ್ರಜಾಪ್ರಭುತ್ವ ಮುಗಿದಿದೆ. ಈಗ ಶವಸಂಸ್ಕಾರ ಮಾತ್ರ ಉಳಿದಿದೆ. ಜಿಹಾದಿಗಳು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಕಾತೂರರಾಗಿದ್ದಾರೆ. ಅದರಿಂದಾಗಿ ‘ಹೋರಾಟ ಮಾಡುವುದೇ ಇಲ್ಲ’ ಎಂದು ಹೇಳಿದರೆ ಬಡೆಯುವುದಿಲ್ಲ. ಕಾರು ನಿಲ್ಲಿಸಿದಾಗ ‘ನನ್ನ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆ’ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕಾರನ್ನು ಸ್ಟಾರ್ಟ್ ಮಾಡಲು ‘ಮೆಕ್ಯಾನಿಕ್’ ಅನ್ನು ಕರೆಯಬೇಕು. ನಾವು ಹಿಂಸೆಯನ್ನು ಬೆಂಬಲಿಸುವುದಿಲ್ಲ; ಆದರೆ ನಮ್ಮ ನಾಶ ಆಗುತ್ತಿದ್ದರೆ ಅದಕ್ಕಾಗಿ ಹೋರಾಡಬೇಕಾಗುತ್ತದೆ.” ಎಂದು ಹೇಳಿದರು.
ಹಿಂದೂಗಳು ಜಿಹಾದಿಗಳಲ್ಲ!
ನ್ಯಾಯವಾದಿ ಪುನಾಳೆಕರ ಇವರು ಮಾತು ಮುಂದುವರೆಸಿ, ಹಿಂದೂಗಳು ಭಯೋತ್ಪಾದಕರಲ್ಲ. ಗಾಂಧಿಯನ್ನು ಪಂಡಿತ ನಾಥೂರಾಂ ಗೋಡ್ಸೆ ಹತ್ಯೆ ಮಾಡಿದರು. ಇದಕ್ಕೆ ಕಾರಣ ಪಂಡಿತ್ ನಾಥೂರಾಂ ಗೋಡ್ಸೆಗೆ ಗಾಂಧೀಜಿಯವರೊಂದಿಗಿನ ವೈರತ್ವವಲ್ಲ; ಆದರೆ ಗಾಂಧಿ ಬದುಕಿದ್ದರೆ ಭಾರತ ಮತ್ತಷ್ಟು ಛಿದ್ರವಾಗುತ್ತಿತ್ತು; ಹಾಗಾಗಿ ಅವರು ಗಾಂಧಿಯನ್ನು ಕೊಂದರು. ಅಜ್ಮಲ್ ಕಸಬ್ ಮುಂಬಯಿ ಮೇಲೆ ದಾಳಿ ಮಾಡಲು ಸಾಧ್ಯವಾಗದಿದ್ದರೆ, ಅವನು ಬೇರೆಡೆ ದಾಳಿ ಮಾಡುತ್ತಿದ್ದನು; ಏಕೆಂದರೆ ಆತನ ಗುರಿ ‘ಜಿಹಾದ್’ ಆಗಿತ್ತು. ಜಿಹಾದ್ ವಿರುದ್ಧ ಮಿಲಿಟರಿ ಬಲವನ್ನು ಬಳಸುವುದೇ ಅದಕ್ಕೆ ಉತ್ತರವಾಗಿದೆ.