ಕಾಸರಗೋಡು (ಕೇರಳ) – ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಬ್ದುಲ್ ಕರೀಂನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕುಂಬಳಾದಿಂದ ಬದಿಯಡ್ಕ ಮಾರ್ಗದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಸೀಟಾಂಗೋಳಿ ಸ್ಟಾಪ್ ದಾಟಿದ ನಂತರ ಆರೋಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ವಿದ್ಯಾರ್ಥಿನಿಯು ವಿರೋಧಿಸಿದಾಗ, ಇತರ ಪ್ರಯಾಣಿಕರು ಅಬ್ದುಲ್ ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ರಾಜ್ಯ ಸಚಿವ ಅವಿನಾಶ್ ರೈ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಅಂತಹವರಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನು ಮಾಡಿ ! |