Stone Pelting on Procession : ನಮಾಜ್‌ಗೆ ತೊಂದರೆ ಆಗುತ್ತಿದೆ ಎಂದು ಹೇಳುತ್ತಾ ಮಸೀದಿಯ ಬಳಿ ಬರುತ್ತಿದ್ದ ಹಿಂದೂಗಳ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ

ಮೀರತ್ (ಉತ್ತರ ಪ್ರದೇಶ) ನಲ್ಲಿ ಘಟನೆ !

ಮೀರತ್ (ಉತ್ತರ ಪ್ರದೇಶ) – ವೀರ ರಾಣಿ ಅವಂತಿಬಾಯಿ ಲೋಧಿ ಅವರ ಜನ್ಮದಿನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಮಸೀದಿಯೊಂದರ ಬಳಿ ಮುಸ್ಲಿಮರು ಕಲ್ಲು ತೂರಾಟ ಮತ್ತು ಹಿಂದೂಗಳನ್ನು ಥಳಿಸಿದ್ದರಿಂದ ಇಲ್ಲಿ ಉದ್ವಿಗ್ನತೆ ಉಂಟಾಗಿದೆ. ಮೆರವಣಿಗೆಯ ವೇಳೆ ‘ಡಿಜೆ’ (ಜೋರಾಗಿ ಸಂಗೀತ ವ್ಯವಸ್ಥೆ) ನುಡಿಸುವುದರಿಂದ ನಮಾಜ್‌ಗೆ ತೊಂದರೆಯಾಗುತ್ತಿದೆ ಎಂದು ಹೇಳಿ ಬಂದ್ ಮಾಡುವಂತೆ ಮುಸ್ಲಿಮರ ಬೇಡಿಕೆಯಿಂದ ವಿವಾದ ಉಂಟಾಯಿತು.

1. ಶಿವಶಕ್ತಿನಗರದ ದುರ್ಜನ ಸಿಂಗ ಲೋಧಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. ರಾತ್ರಿ 10 ಗಂಟೆ ಸುಮಾರಿಗೆ ಖೈರ್‌ನಗರದ ಹೌಜ್ ವಾಲಿ ಮಸೀದಿಗೆ ಮೆರವಣಿಗೆ ಬಂದಾಗ, ಡಿಜೆಯಿಂದ ತೊಂದರೆಯಾಗುತ್ತಿದೆ ಎಂದು ಹೇಳಿ ಡಿಜೆ ನಿಲ್ಲಿಸಬೇಕು ಎಂದು ಮುಸ್ಲಿಮರು ಒತ್ತಾಯಿಸಿದರು.

2. ಅದೇ ಸಮಯದಲ್ಲಿ, ಮೆರವಣಿಗೆಯಲ್ಲಿ ಸ್ಪೀಕರ್ ಮುಸ್ಲಿಂ ಹುಡುಗನ ಮೇಲೆ ಬಿತ್ತು ಎಂದು ಅವರು ಆರೋಪಿಸಿದರು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಕಲ್ಲು ತೂರಾಟ ನಡೆಸಿದರು. ಇದಾದ ಬಳಿಕ ಮತ್ತೊಂದು ಕಡೆಯವರು ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

3. ಮೆರವಣಿಗೆಯ ಆಯೋಜನಾ ಸಮಿತಿಯ ಸದಸ್ಯ ಪ್ರವೀಣ್ ಲೋಧಿ ಅವರು ಮಾತನಾಡಿ, ನಮ್ಮ ಮೆರವಣಿಗೆಯಲ್ಲಿ ಸ್ಪೀಕರ್ ಬಿದ್ದಿಲ್ಲ. ಸಂಬಂಧಪಟ್ಟ ಮಗುವಿಗೆ ಬೇರೆ ಯಾವುದೋ ತಾಗಿ ಗಾಯ ಆಗಿದೆ ಎಂದು ಹೇಳಿದರು.

4. ಮೆರವಣಿಗೆ ಮೇಲೆ ದಾಳಿ ನಡೆಸಿದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಭಾಜಪ ಆಗ್ರಹಿಸಿದೆ. 2006 ರಿಂದ ಇಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಮಸೀದಿಗಳ ಬಳಿ ನಡೆಯುವ ಹಿಂದೂ ಮೆರವಣಿಗೆಗಳ ಮೇಲೆ ಕಲ್ಲು ತೂರಾಟವಾಗುತ್ತದೆ ಮತ್ತು ಅದನ್ನು ಯಾವ ಸರಕಾರವೂ ತಡೆಯುವುದಿಲ್ಲ, ಇದು ಅವರನ್ನು ಚುನಾಯಿಸಿದ ಹಿಂದೂಗಳಿಗೆ ಅವಮಾನ !