ಭಾರತದಲ್ಲಿ ಬಾಂಗ್ಲಾದೇಶದಂತಹ ಘಟನೆಗಳು ನಡೆಯಬಹುದು, ಎಂದು ಹೇಳುವವರಿಂದ ಜಾಗರೂಕರಾಗಿರಿ ! – ಉಪ ರಾಷ್ಟ್ರಪತಿ ಜಗದೀಪ ಧನಕರ್

ಜೋಧಪುರ (ರಾಜಸ್ಥಾನ) – ದೇಶವಿರೋಧಿ ಶಕ್ತಿಗಳು ಸಾಂವಿಧಾನಿಕ ಸಂಸ್ಥೆಯನ್ನು ಅವರ ಅಭಿಪ್ರಾಯ ಮಂಡಿಸುವ ವೇದಿಕೆಯನ್ನಾಗಿ ಉಪಯೋಗಿಸಿಕೊಳ್ಳುತ್ತಿವೆ. ಈ ದೇಶವನ್ನು ವಿಭಾಜಿಸಲು ಈ ಶಕ್ತಿಗಳು ತಯಾರಾಗಿವೆ. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವು ಭಾರತದಲ್ಲಿ ಕೂಡ ನಡೆಯುವುದು ಎಂದು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಇಂತಹ ಜನರಿಂದ ಎಚ್ಚರಿಕೆಯಿಂದ ಇರುವುದು ಆವಶ್ಯಕವಾಗಿದೆ, ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಕರೆ ನೀಡಿದರು. ರಾಜಸ್ಥಾನದಲ್ಲಿನ ಬಾರ್ ಕೌನ್ಸಿಲಿನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬಾಂಗ್ಲಾದೇಶದಂತಹ ಸ್ಥಿತಿ ಭಾರತದಲ್ಲಿ ಬರಬಹುದು ಎಂದು ಕಾಂಗ್ರೆಸಿನ ನಾಯಕ ಸಲ್ಮಾನ್ ಖುರ್ಶಿದ್ ಅವರ ಹೇಳಿಕೆಯ ಕುರಿತು ಉಪರಾಷ್ಟ್ರಪತಿ ಧನಕರ್ ಪ್ರತಿಕ್ರಿಯಿಸಿದ್ದು, ಇಂತಹ ಹೇಳಿಕೆ ನೀಡುವವರು ತಮ್ಮ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ದೇಶದ ಸಂಸತ್ತಿನ ಸದಸ್ಯರು ಮತ್ತು ಸಚಿವರಾಗಿದ್ದರು. ಅವರಲ್ಲಿನ ಒಬ್ಬರಿಗೆ ವಿದೇಶಾಂಗ ಸೇವೆಯ ಸುಧೀರ್ಘ ಅನುಭವವಿದೆ. ಅಂತಹ ಮಹತ್ವದ ಸ್ಥಾನದಲ್ಲಿದ್ದವರು ಈ ರೀತಿ ಸುಳ್ಳು ಪ್ರಚಾರ ಹೇಗೆ ಮಾಡಲು ಸಾಧ್ಯ? ಎಂದು ಉಪರಾಷ್ಟ್ರಪತಿ ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಇಂಥವರಿಂದ ಎಚ್ಚರಿಕೆಯಾಗಿ ಇರುವ ಬದಲು ಇಂಥವರ ವಿರುದ್ಧ ದೇಶದ್ರೋಹದ ಅಪರಾಧ ದಾಖಲಿಸಿ ಆಜೀವನ ಜೈಲು ಶಿಕ್ಷೆ ನೀಡಬೇಕು.