ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾರಿಂದ ಘೋಷಣೆ !
ಗುವಾಹಾಟಿ (ಅಸ್ಸಾಂ) – ‘ಲವ್ ಜಿಹಾದ್’ ವಿರುದ್ಧ ಕಾಯಿದೆಯನ್ನು ರಚಿಸಲಾಗುತ್ತಿದ್ದು, ಇದರಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ಅನುಮತಿಯಿಲ್ಲದೆ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರರ ಭೂಮಿಯನ್ನು ಖರೀದಿಸಲು/ಮಾರಾಟ ಮಾಡಲು ಸಾಧ್ಯವಿಲ್ಲ. ಅಸ್ಸಾಂನ ಗೋಲಪಾರಾ ಜಿಲ್ಲೆಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕಾರಣ, ಹಿಂದೂ ಸಮುದಾಯದ ಜನರು ಭೂಮಿಯನ್ನು ಮಾರಲು ಅನುಮತಿಸುವುದಿಲ್ಲ ಎಂದು ಅವರು ಘೋಷಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಅಸ್ಸಾಂನಲ್ಲಿ ಬುಡಕಟ್ಟು ಸಮುದಾಯದವರ ಭೂಮಿಯ ಹಕ್ಕುಗಳನ್ನು ರಕ್ಷಿಸಲು ಕೂಡ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸರಮಾ ತಿಳಿಸಿದ್ದಾರೆ.
A law will be enacted in Assam to sentence perpetrators of ‘love ji#ad’ to life imprisonment. – Assam’s Chief Minister Himanta Biswa Sarma’s announcement.
Such a law should be implemented by the Central Government for the entire country. pic.twitter.com/fcIPdotszE
— Sanatan Prabhat (@SanatanPrabhat) August 5, 2024
ಅಸ್ಸಾಂನಲ್ಲಿ ಜನಿಸಿದವರಿಗೆ ಮಾತ್ರ ನೌಕರಿ !
ಮುಖ್ಯಮಂತ್ರಿ ಸರಮಾ ಮುಂದೆ ಮಾತನಾಡಿ, ಅಸ್ಸಾಂ ರಾಜ್ಯದಲ್ಲಿ ಜನಿಸಿದವರಿಗೆ ಮಾತ್ರ ಸರಕಾರಿ ನೌಕರಿ ನೀಡಲಾಗುವುದು. ರಾಜ್ಯದ ಬದಲಾಗುತ್ತಿರುವ ಜನಸಂಖ್ಯೆಯ ಹೆಚ್ಚುತ್ತಿರುವ ಆತಂಕದಿಂದಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ನೀಡುವ ನೀತಿಯನ್ನು ಎರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದವರು ವಿವರಿಸಿದರು.
ಸಂಪಾದಕೀಯ ನಿಲುವುಕೇಂದ್ರ ಸರಕಾರವೇ ಇಡೀ ದೇಶಕ್ಕಾಗಿ ಇಂತಹ ಕಾನೂನನ್ನು ರಚಿಸುವ ಅಗತ್ಯವಿದೆ. |