ಮಧ್ಯಪ್ರದೇಶದಲ್ಲಿ ಮೊಘಲರ ಕಾಲದ ಮೂರು ಕಟ್ಟಡಗಳ ಮೇಲೆ ವಕ್ಫ್ ಮಂಡಳಿಗೆ ಯಾವುದೇ ಹಕ್ಕಿಲ್ಲ! – ಜಬಲ್ಪುರ ಉಚ್ಚನ್ಯಾಯಾಲಯ

ಜಬಲ್ಪುರ ಉಚ್ಚನ್ಯಾಯಾಲಯದ ತೀರ್ಪು

ಜಬಲ್ಪುರ (ಮಧ್ಯಪ್ರದೇಶ) – ಮಧ್ಯಪ್ರದೇಶ ವಕ್ಫ್ ಬೋರ್ಡನ ಬುರಹಾನಪೂರ ಜಿಲ್ಲೆಯಲ್ಲಿರುವ `ಬೀವಿಚಿ ಮಶೀದಿ’ `ಆದಿಲ್ ಶಾಹ ಮುಬಾರಕ್ ಶಾಹ ಗೋರಿ ಮತ್ತು ಬೇಗಮ್ ಶುಜಾಚಾ ಸಮಾಧಿ’ ಈ ಮೂರು ಮೊಗಲರ ಕಾಲದ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಗೆ ಯಾವುದೇ ಅಧಿಕಾರವಿಲ್ಲ ಎಂದು ಜಬಲ್ಪುರ ಉಚ್ಚನ್ಯಾಯಾಲಯ ತೀರ್ಪು ನೀಡಿದೆ. ಮೊಗಲರ ಕಾಲದ ಈ ಆಸ್ತಿಗಳ ಮೇಲೆ ಭಾರತೀಯ ಪುರಾತತ್ವ ಇಲಾಖೆಗೆ ಅಧಿಕಾರವಿದೆ ಎಂದು ಉಚ್ಚನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ. ವಕ್ಫ್ ಬೋರ್ಡ್ ಈ ಮೂರು ಐತಿಹಾಸಿಕ ಕಟ್ಟಡಗಳನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸಿತ್ತು. ಈ ಬಗ್ಗೆ ಜಬಲ್ಪುರ ಉಚ್ಚನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು.

1. ಉಚ್ಚನ್ಯಾಯಾಲಯದ ಈ ತೀರ್ಪಿನ ವಿರುದ್ಧ ನಾವು ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಬುರಹಾನಪೂರ ವಕ್ಫ ಬೋರ್ಡ್ ಅಧ್ಯಕ್ಷ ಶೇಖ್ ಫಾರೂಕ್ ಹೇಳಿದ್ದಾರೆ.

2. ‘ಉಚ್ಚನ್ಯಾಯಾಲಯದ ಈ ತೀರ್ಪು ಅತ್ಯಂತ ಉತ್ತಮವಾಗಿದು ಅದನ್ನು ನಾವು ಸ್ವಾಗತಿಸಬೇಕು’ ಎಂದು ಇತಿಹಾಸಕಾರ ಕಮರುದ್ದೀನ್ ಫಾಲಕ್ ಅವರು ಅಭಿಪ್ರಾಯಪಟ್ಟಿದ್ದಾರೆ. ಇವು ಮೂರು ಪುರಾತನ ಐತಿಹಾಸಿಕ ಕಟ್ಟಡಗಳಾಗಿವೆ. ಈ ಸ್ಮಾರಕಗಳನ್ನು ಸರಿಯಾಗಿ ನೋಡಿಕೊಳ್ಳುವ ಇಲಾಖೆಗೆ ಅದರ ಅಧಿಕಾರ ನೀಡಬೇಕು. ಏಕೆಂದರೆ ಆ ಇಲಾಖೆಯಲ್ಲಿ ಪರಿಣಿತರು ಮತ್ತು ಅನುಭವಿಗಳಿದ್ದಾರೆ. ಅದೇ ಈ ಸ್ಮಾರಕಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದರೆ, ಅವರಿಗೆ ಈ ಸ್ಮಾರಕಗಳ ನೈಜತೆ ಅರ್ಥವಾಗುತ್ತಿರಲಿಲ್ಲ ಎಂದರು.

3. ಅರ್ಜಿಯಲ್ಲಿ 2013 ರಲ್ಲಿ ಮಧ್ಯಪ್ರದೇಶದ ವಕ್ಫ್ ಮಂಡಳಿಯು ಈ ಸ್ಮಾರಕಗಳನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸಿತ್ತು ಎಂದು ಹೇಳಲಾಗಿತ್ತು; ಆದರೆ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ 1904ರ ಅಡಿಯಲ್ಲಿ, ಇವುಗಳನ್ನು ಪ್ರಾಚೀನ ಮತ್ತು ಸಂರಕ್ಷಿತ ಸ್ಮಾರಕಗಳ ವರ್ಗದಲ್ಲಿ ಇರಿಸಲಾಗಿತ್ತು. ಹಾಗಾಗಿ ಇವನ್ನು ವಕ್ಫ್ ಮಂಡಳಿಯ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ.

4. ವಕ್ಫ್ ಮಂಡಳಿಯ ಅಧಿಸೂಚನೆಯು ಭಾರತೀಯ ಪುರಾತತ್ವ ಇಲಾಖೆ ಅಥವಾ ಕೇಂದ್ರ ಸರ್ಕಾರದ ಮಾಲೀಕತ್ವದ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ .ಈಗ ಈ ಪ್ರಾಚೀನ ಕಟ್ಟಡಗಳ ಮೇಲೆ ವಕ್ಫ್ ಬೋರ್ಡಗೆ ಯಾವುದೇ ಹಕ್ಕಿಲ್ಲ ಎಂದು ಜಬಲ್ಪುರ ಉಚ್ಚನ್ಯಾಯಾಲಯವು ತೀರ್ಪು ನೀಡಿದೆ.

ಸಂಪಾದಕೀಯ ನಿಲುವು

ಮೊದಲು ಕೇಂದ್ರ ಸರಕಾರವು ವಕ್ಫ್ ಕಾಯ್ದೆ ಮತ್ತು ಮಂಡಳಿ ಎರಡನ್ನೂ ರದ್ದುಪಡಿಸುವ ಅವಶ್ಯಕತೆಯಿದೆ. ರೈಲ್ವೆ, ರಕ್ಷಣಾ ಸಚಿವಾಲಯದ ನಂತರ ವಕ್ಫ್ ಮಂಡಳಿಯು ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಸರಿಯಲ್ಲ!