Centre Curb Waqf Power : ವಕ್ಫ್ ಬೋರ್ಡನ ಅಧಿಕಾರದಲ್ಲಿ ಅಂಕುಶ ಇಡುವ ಸಿದ್ಧತೆಯಲ್ಲಿ ಕೇಂದ್ರ ಸರಕಾರ !

ದೇಶಾದ್ಯಂತ ವಕ್ಫ್ ಬೋರ್ಡಿನ ೯ ಲಕ್ಷ ೪೦ ಸಾವಿರ ಎಕರೆ ಭೂಮಿ ಹಾಗೂ ೮ ಲಕ್ಷ ೭೦ ಸಾವಿರದ ಆಸ್ತಿ !

ನವ ದೆಹಲಿ – ಕೇಂದ್ರ ಸರಕಾರ ಆಗಸ್ಟ್ ೫ ರಂದು ಸಂಸತ್ತಿನಲ್ಲಿ ವಕ್ಪ್ ಬೋರ್ಡಿನ ಅಧಿಕಾರದಲ್ಲಿ ಕಡಿತ ಗೊಳಿಸುವ ಮಸೂದೆ ಮಂಡಿಸುವುದು. ಸರಕಾರ ವಕ್ಫ್ ಗೆ ಸಿಕ್ಕಿರುವ ಅಪರಿಮಿತ ಅಧಿಕಾರದ ಮೇಲೆ ಅಂಕುಶ ಇಡುವ ಸಿದ್ಧತೆಯಲ್ಲಿದೆ. ಪ್ರಸ್ತುತ ವಕ್ಫ್ ಬೋರ್ಡ್ ಯಾವುದೇ ಆಸ್ತಿಯನ್ನು ತನ್ನದೆಂದು ಘೋಷಿಸಬಹುದು. ಬಳಿಕ ಆ ಆಸ್ತಿಯನ್ನು ಹಿಂಪಡೆಯುವುದಕ್ಕಾಗಿ ಮಾಲೀಕರು ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಇದರಿಂದ ಸಂಸತ್ತಿನಲ್ಲಿ ಮಂಡಿಸುವ ಮಸೂದೆಯಲ್ಲಿ ವಕ್ಫ್ ಬೋರ್ಡ್ ಅಧಿಕಾರ ಸೀಮಿತಗೊಳಿಸಲಾಗುವುದು. ಈಗ ದೇಶದಲ್ಲಿ ೨೮ ರಾಜ್ಯಗಳು ಹಾಗೂ ೨ ಕೇಂದ್ರಾಡಳಿತ ಪ್ರದೇಶ ಸೇರಿ ೩೦ ವಕ್ಫ್ ಬೋರ್ಡ್ ಇದೆ.

೧. ಕೇಂದ್ರ ಸಚಿವ ಸಂಪುಟದ ಸಭೆಯು ಆಗಸ್ಟ್ ೨ ರಂದು ನಡೆದಿತ್ತು. ಅದರಲ್ಲಿ ವಕ್ಫ್ ಅಧಿನಿಯಮದಲ್ಲಿ ೪೦ ಸುಧಾರಣೆ ಮಾಡುವ ಸಂದರ್ಭದಲ್ಲಿ ಚರ್ಚೆ ನಡೆದಿದೆ. ಹೊಸ ಸುಧಾರಣೆಯ ಪ್ರಕಾರ ವಕ್ಫ್ ಬೋರ್ಡ್ ಯಾವ ಆಸ್ತಿಯ ಮೇಲೆ ದಾವೆ ಮಾಡುವುದೋ ಆ ಸಂಪತ್ತಿಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು. ಹಾಗೂ ವಿವಾದಿತ ಆಸ್ತಿಯ ಸಂದರ್ಭದಲ್ಲಿ ಕೂಡ ದಾಖಲೆಗಳನ್ನು ಪರಿಶೀಲಿಸುವುದು ಅನಿವಾರ್ಯವಾಗುವುದು.

೨. ದೇಶದಲ್ಲಿ ವಕ್ಫ್ ಬೋರ್ಡಿನ ಬಳಿ ೯ ಲಕ್ಷ ೪೦ ಸಾವಿರ ಎಕರೆ ಭೂಮಿ ಮತ್ತು ೮ ಲಕ್ಷ ೭೦ ಸಾವಿರದಷ್ಟು ಆಸ್ತಿ ಇದೆ. ಇದರಿಂದ ಸರಕಾರ ವಕ್ಫ್ ಬೋರ್ಡ್ ದಾವೆಗಳ ಪರಿಶೀಲನೆ ನಡೆಸುವ ಪ್ರಕ್ರಿಯೆ ಆರಂಭಿಸುವುದು. ಯಾವ ಆಸ್ತಿಯ ಕುರಿತು ಮಾಲೀಕರು ಮತ್ತು ವಕ್ಫ್ ಬೋರ್ಡ್ ಇವರಲ್ಲಿ ವಿವಾದವಿದೆ, ಆಯಾ ಆಸ್ತಿಯ ಪರಿಶೀಲನೆ ನಡೆಯುವುದು.

೩. ಕಾಂಗ್ರೆಸ್ ಸರಕಾರದ ಕಾಲದಲ್ಲಿ ವಕ್ಫ್ ಬೋರ್ಡಿಗೆ ಹೆಚ್ಚು ವ್ಯಾಪಕ ಅಧಿಕಾರ ನೀಡಲು ೨೦೧೩ ರಲ್ಲಿ ಮೂಲ ಕಾನೂನಿನಲ್ಲಿ ಸುಧಾರಣೆ ಮಾಡಲಾಗಿತ್ತು. ಬಳಿಕ ವಕ್ಫ್ ಬೋರ್ಡ್ ಮತ್ತು ಆಸ್ತಿಯ ಮಾಲೀಕರ ನಡುವೆ ವಿವಾದ ಹೆಚ್ಚುತ್ತಾ ಹೋಯಿತು.

೪. ವಕ್ಫ್ ಕಾನೂನು ೧೯೫೪ ರಲ್ಲಿ ರೂಪಿಸಲಾಗಿತ್ತು. ೧೯೯೫ ರಲ್ಲಿ ವಕ್ಫ್ ಕಾನೂನು ಸುಧಾರಣೆಗೊಳಿಸಿ ವಕ್ಫ್ ಬೋರ್ಡಿಗೆ ಅಪರಿಮಿತ ಅಧಿಕಾರ ನೀಡಲಾಯಿತು. ಇದರ ಪ್ರಕಾರ ವಕ್ಫ್ ಬೋರ್ಡ್ ಯಾವುದೇ ಆಸ್ತಿಯ ಮೇಲೆ ಹಕ್ಕು ಇದೆ ಎಂದು ಹೇಳಿದರೆ ಅದು ಅದರ ಆಸ್ತಿ ಎಂದು ಹೇಳಲಾಗುತ್ತಿತ್ತು.

ಇಸ್ಲಾಮಿ ದೇಶಗಳಲ್ಲಿ ಕೂಡ ವಕ್ಫ್ ಬೋರ್ಡಿಗೆ ಅಪರಿಮಿತ ಅಧಿಕಾರವಿಲ್ಲ !

ಕಳೆದ ಕೆಲವು ದಿನಗಳಿಂದ ವಕ್ಫ್ ಬೋರ್ಡ್ ನ ಅನಿರ್ಬಂಧಿತ ಅಧಿಕಾರದಲ್ಲಿ ಬದಲಾವಣೆ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಮುಸಲ್ಮಾನ ವಿಚಾರವಂತರು, ಮಹಿಳೆಯರು, ಶಿಯಾ ಮತ್ತು ಬೋಹರಾ ಜನಾಂಗದಲ್ಲಿನ ಬೇರೆ ಬೇರೆ ವ್ಯಕ್ತಿಗಳು ಈ ಕಾನೂನಿನಲ್ಲಿ ಬದಲಾವಣೆ ಮಾಡಲು ಒತ್ತಾಯಿಸುತ್ತಿದ್ದರು. ಓಮನ್, ಸೌದಿ ಅರೇಬಿಯಾ ಹಾಗೂ ಇತರ ಇಸ್ಲಾಮಿ ದೇಶಗಳಲ್ಲಿ ಕಾನೂನಿನ ಪ್ರಾಥಮಿಕ ಅವಲೋಕನದ ನಂತರ ಈ ದೇಶದಲ್ಲಿ ಕೂಡ ವಕ್ಫ್ ಬೋರ್ಡ್ ಗೆ ಇಷ್ಟೊಂದು ಅಧಿಕಾರವಿಲ್ಲ, ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಏನು ಸುಧಾರಣೆ ಇರಲಿದೆ ?

ಕೇಂದ್ರ ಸರಕಾರವು ಪ್ರಸ್ತಾವಿಸಿರುವ ಪ್ರಮುಖ ಸುಧಾರಣೆಯಲ್ಲಿ ವಕ್ಫ್ ಬೋರ್ಡಿನ ಪುನರ್ನಿರ್ಮಾಣ ಮಾಡುವುದು, ಬೋರ್ಡಿನ ರಚನೆ ಬದಲಾಯಿಸುವುದು ಮತ್ತು ಬೋರ್ಡ್ ಘೋಷಿಸುವ ಮೊದಲು ವಕ್ಫ್ ಆಸ್ತಿಯ ಪರಿಶೀಲನೆ ನಿಶ್ಚಿತಗೊಳಿಸುವ ಸಮಾವೇಶವಿದೆ. ಕೇಂದ್ರ ವಕ್ಫ್ ಪರಿಷತ್ ಮತ್ತು ರಾಜ್ಯ ವಕ್ಫ್ ಬೋರ್ಡ್ ಇವುಗಳ ಸಂರಚನೆಯಲ್ಲಿ ಬದಲಾವಣೆ ಮಾಡುವುದಕ್ಕಾಗಿ ವಕ್ಫ್ ಕಾನೂನಿನ ಕಲಂ ೯ ಮತ್ತು ಕಲಂ ೧೪ ರಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವ ಮಸೂದೆಯಲ್ಲಿ ಇದೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಕೇವಲ ಅಧಿಕಾರದಲ್ಲಿ ಕಡಿತ ಅಷ್ಟೇ ಅಲ್ಲ ವಕ್ಫ್ ಬೋರ್ಡ್ ರದ್ದುಪಡಿಸಿ !