ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬಹಿರಂಗ
ಮಥುರಾ (ಉತ್ತರ ಪ್ರದೇಶ) – ಆಸಿಫ್ ಕುರೇಶಿ ಎಂಬ ಮುಸ್ಲಿಂ ಯುವಕನೊಬ್ಬನು ತಾನು ‘ರಾಹುಲ್’ ಎಂದು ಹೇಳಿ ಹಿಂದೂ ಯುವತಿಯೊಬ್ಬಳನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿದ್ದಲ್ಲದೇ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದು ವಿಡಿಯೋ ಮಾಡಿದ್ದನು. ನಂತರ ಆ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೋರಿಸಿ ಬೆದರಿಸಿ ಆ ಯುವತಿಗೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದನು. ಕೆಲವು ದಿನಗಳ ಬಳಿಕ ರಾಹುಲ್ ನ ನಿಜವಾದ ಹೆಸರು ಆಸಿಫ್ ಕುರೇಶಿ ಎಂದು ಸಂತ್ರಸ್ತ ಯುವತಿಗೆ ತಿಳಿದ ಬಳಿಕ ಜುಲೈ 30 ರಂದು ಸಂತ್ರಸ್ತ ಯುವತಿಯು ಯುವಕನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದಳು.
ಸಂತ್ರಸ್ತ ಯುವತಿಯ ಕುಟುಂಬದವರು ತಮ್ಮ ಮಗಳನ್ನು ಆಸಿಫ್ ಕುರೇಶಿ `ಲವ್ ಜಿಹಾದ’ ನ ಜಾಲದಲ್ಲಿ ಸಿಲುಕಿಸಿರುವ ಆರೋಪ ಮಾಡಿದ್ದಾರೆ. ಆಸಿಫ್ ಕುರೇಶಿಯು 2 ಮೇ 2024 ರಂದು ಯುವತಿಯನ್ನು ಭೇಟಿಯಾಗುವ ನೆಪದಲ್ಲಿ ಅವಳನ್ನು ಕರೆಸಿ ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಇಟ್ಟುಕೊಂಡನು. ಅವಳ ಅಶ್ಲೀಲ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಿದನು ಎಂದು ಸಂತ್ರಸ್ತ ಯುವತಿಯು ದೂರಿನಲ್ಲಿ ತಿಳಿಸಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಆರೋಪಿಯನ್ನು ಹುಡುಕುತ್ತಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ವಿರೋಧಿ ಕಾನೂನು ಎಷ್ಟೇ ಕಠೋರವಾಗಿದ್ದರೂ ಸಹ ಮತಾಂಧ ಮುಸಲ್ಮಾನರು ಅದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವುದೇ ಇದರಿಂದ ಕಂಡುಬರುತ್ತದೆ. ಸರಕಾರವು ಈಗ ಇಂತಹವರಿಗೆ ತಕ್ಕ ಪಾಠವಾಗುವಂತಹ ಕ್ರಮವನ್ನು ತೆಗೆದುಕೊಳ್ಳಬೇಕು! |