Kerala Nirmala College Namaz : ಎರ್ನಾಕುಲಂ (ಕೇರಳ) ಇಲ್ಲಿಯ ಚರ್ಚ್ ಸಂಚಾಲಿತ ಕಾಲೇಜಿನ ಮುಸಲ್ಮಾನ ವಿದ್ಯಾರ್ಥಿಗಳಿಂದ ನಮಾಜ್ ಗಾಗಿ ಸ್ವತಂತ್ರ ಕೋಣೆಗೆ ಆಗ್ರಹ !

ಕಾಲೇಜು ಆಡಳಿತದಿಂದ ನಿರಾಕರಣೆ !

ಎರ್ನಾಕುಲಂ (ಕೇರಳ) – ಇಲ್ಲಿಯ ಚರ್ಚ್ ಸಂಚಾಲಿತ ನಿರ್ಮಲಾ ಕಾಲೇಜಿನಲ್ಲಿ ಮುಸಲ್ಮಾನ ವಿದ್ಯಾರ್ಥಿಗಳು ನಮಾಜಗಾಗಿ ಸ್ವತಂತ್ರ ಕೋಣೆಯ ಬೇಡಿಕೆ ಮಾಡಿದ್ದರಿಂದ ವಿವಾದ ನಿರ್ಮಾಣವಾಗಿದೆ. ಕಾಲೇಜ ಆಡಳಿತ ಮತ್ತು ಚರ್ಚ್ ಇವರು ಇದಕ್ಕೆ ವಿರೋಧಿಸಿದ್ದಾರೆ. ನಮಾಜಗೆ ಅನುಮತಿ ನೀಡಲಾಗದು’, ಎಂದು ಚರ್ಚ್ ಹೇಳಿದೆ. ಕ್ರೈಸ್ತ ಸಂಘಟನೆಗಳು ಕೂಡ ಮುಸಲ್ಮಾನ ವಿದ್ಯಾರ್ಥಿಗಳ ಈ ಬೇಡಿಕೆಗೆ ವಿರೋಧಿಸಿದ್ದಾರೆ.

ಕಾಲೇಜನಲ್ಲಿ ಆಡಳಿತದ ಅನುಮತಿ ಇಲ್ಲದೆ ನಮಾಜ ಪಠಣೆ !

ನಿರ್ಮಲಾ ಕಾಲೇಜಿನ ಅತಿಥಿ ಕೊಠಡಿಯಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ಜುಲೈ ೨೬ ರಂದು ನಮಾಜ ಮಾಡಿದರು. ಇಲ್ಲಿಯ ಸಿಬ್ಬಂದಿಗಳು ಈ ಮಾಹಿತಿ ಕಾಲೇಜ್ ಆಡಳಿತಕ್ಕೆ ತಿಳಿಸಿದರು. ಬಳಿಕ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ನಮಾಜ ಮಾಡುವುದರಿಂದ ತಡೆಯಲಾಯಿತು. ಇದರ ನಂತರ ಮುಸಲ್ಮಾನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ಆರಂಭಿಸಿದರು ಮತ್ತು ಪ್ರತಿದಿನ ನಮಾಜ ಮಾಡುವುದಕ್ಕಾಗಿ ಸ್ವತಂತ್ರ ಕೋಣೆ ನೀಡಲು ಆಗ್ರಹಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿ ಸಂಘಟನೆಗಳು ಕೂಡ ಮುಸಲ್ಮಾನ ವಿದ್ಯಾರ್ಥಿಗಳಿಗೆ ಬೆಂಬಲಿಸಲು ಮುಂದೆ ಬಂದಿದ್ದಾರೆ. ಮುಸಲ್ಮಾನ ವಿದ್ಯಾರ್ಥಿನಿಯರು, ಇದು ನಮ್ಮ ಧರ್ಮದ ಭಾಗವಾಗಿದೆ ಮತ್ತು ಅದಕ್ಕೆ ಸ್ವತಂತ್ರ ಕೋಣೆಯ ಅವಶ್ಯಕತೆ ಇದೆ ಎಂದು ಹೇಳಿದರು. (‘ಕಾಲೇಜ್ ಇರಲಿ ಅಥವಾ ಆಸ್ಪತ್ರೆ ಅಲ್ಲಿ ಮುಸಲ್ಮಾನರು ಮೊದಲು ಮುಸಲ್ಮಾನರಾಗಿರುತ್ತಾರೆ ಮತ್ತು ನಂತರ ವಿದ್ಯಾರ್ಥಿ ಅಥವಾ ಡಾಕ್ಟರ್ ಆಗಿರುತ್ತಾರೆ, ಇದು ಇದರಿಂದ ಸ್ಪಷ್ಟವಾಗುತ್ತದೆ. ಮುಸಲ್ಮಾನ ಮಹಿಳೆಯರಿಗೆ ಅವರ ಮಸೀದಿಯಲ್ಲಿ ನಮಾಜಗಾಗಿ ಪ್ರವೇಶ ನಿಷಿದ್ಧವಾಗಿದೆ; ಆದರೆ ಇದೇ ಮಹಿಳೆಯರು ಜಾತ್ಯತೀತತೆಯ ಹೆಸರಿನಲ್ಲಿ ಕಾಲೇಜು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಮಾಜಗೆ ಹಠ ಮಾಡುತ್ತಾರೆ. ಇದು ಧರ್ಮ ಸ್ವಾತಂತ್ರ್ಯದ ಅತಿರೇಕ ಅಲ್ಲವೇ ? – ಸಂಪಾದಕರು)

೧. ಕಾಲೇಜಿನ ಪ್ರಾಂಶುಪಾಲ ಜಸ್ಟಿನ್ ಕನ್ನನ ಇವರು ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಾಲೇಜಿನ ಆಡಳಿತವು, ಇದು ಒಂದು ಜಾತ್ಯಾತೀತ ಸಂಸ್ಥೆ ಆಗಿದ್ದು ಇಲ್ಲಿ ಯಾರಿಗೂ ನಮಾಜಗೆ ಅನುಮತಿ ನೀಡಲಾಗುವುದಿಲ್ಲ. ಅವರಿಗೆ ನಮಾಜ ಮಾಡುವುದಿದ್ದರೆ ಶುಕ್ರವಾರ ರಜೆ ನೀಡಲಾಗುವುದು, ಆದರೆ ಅವರು ಲಿಖಿತ ಅರ್ಜಿ ನೀಡಬೇಕಾಗುತ್ತದೆ.

೨. ಸಾಯರೋ ಮಲಬಾರ್ ಚರ್ಚ್ ಮತ್ತು ‘ಕ್ಯಾಥೋಲಿಕ್ ಕಾಂಗ್ರೆಸ್’, ಇವರು ಇದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಯರೋ ಮಲಬಾರ್ ಚರ್ಚ್‌ನ ಸಾರ್ವಜನಿಕ ವ್ಯವಹಾರ ಸಮಿತಿಯು, ಕ್ರೈಸ್ತ ಸಂಸ್ಥೆಗಳಲ್ಲಿ ಧಾರ್ಮಿಕ ಹಸ್ತಕ್ಷೇಪ ಮಾಡುವ ಪ್ರಯತ್ನವನ್ನು ವಿರೋಧಿಸಲಾಗುವುದು. ಚರ್ಚ್‌ನ ಪ್ರಮುಖ ಬಿಷಪ್ ಥರಾಯಲ್ ಇವರು, ನಿರ್ಮಲಾ ಕಾಲೇಜಿನಲ್ಲಿನ ಘಟನೆಯಿಂದ ಇಲ್ಲಿಯ ವಾತಾವರಣ ಹದಗೆಟ್ಟಿದೆ. ಇದು ಒಂದು ಸ್ವಾಯತ್ತ ಸಂಸ್ಥೆ ಆಗಿದೆ, ಅದಕ್ಕೆ ಸ್ವಂತದ ಶೈಕ್ಷಣಿಕ ಮಾನದಂಡ ಇದೆ, ಎಂದು ಹೇಳಿದರು.

೩. ಕೇರಳದಲ್ಲಿನ ೨ ಪ್ರಮುಖ ವಿದ್ಯಾರ್ಥಿ ಸಂಘಟನೆಗಳು ಕೂಡ ಮುಸಲ್ಮಾನ ವಿದ್ಯಾರ್ಥಿಗಳ ಬೇಡಿಕೆಯನ್ನು ಬೆಂಬಲಿಸಿ ಕಾಲೇಜಿನ ವಾತಾವರಣ ಹದಗೆಡಿಸಿದ್ದಾರೆ.

೪. ಕ್ಯಾಥೋಲಿಕ್ ಕಾಂಗ್ರೆಸ್, ಚರ್ಚ್‌ನಿಂದ ನಡೆಸಲಾಗುವ ಕಾಲೇಜುಗಳು ಮತ್ತು ಶಾಲೆಗಳಲ್ಲಿ ನಮಾಜ ಮಾಡಲು ಯಾವುದೇ ಕೋಣೆ ಅಥವಾ ಸ್ಥಳ ನೀಡಲಾಗುವುದಿಲ್ಲ. ಈ ಪ್ರಕರಣದಲ್ಲಿ ಕ್ಯಾಥೋಲಿಕ್ ಕಾಂಗ್ರೆಸವು ಮೌಲ್ವಿಗಳಿಗೆ (ಇಸ್ಲಾಂನ ಧಾರ್ಮಿಕ ನಾಯಕ) ಮಸೀದಿಯಲ್ಲಿ ಮಹಿಳೆಯರಿಗಾಗಿ ಸ್ಥಳದ ನಿರ್ಮಾಣ ಮಾಡಲು ಕರೆ ನೀಡಿದ್ದಾರೆ. (ಹೀಗೆ ಮಾಡುವ ಧೈರ್ಯ ಮೌಲ್ವಿ ತೋರಿಸುವರೆ ? – ಸಂಪಾದಕರು)

ಸಂಪಾದಕೀಯ ನಿಲುವು

  • ಜಾತ್ಯತೀತ ಭಾರತದಲ್ಲಿ ಮುಸಲ್ಮಾನರಿಗೆ ಪ್ರತಿಯೊಂದು ವಿಷಯ ಧರ್ಮದ ಆಧಾರ ನೀಡುತ್ತಿರುವುದರಿಂದ ಈ ರೀತಿಯ ಆಗ್ರಹ ಮಾಡಲಾಗುತ್ತದೆ. ಇಂತಹ ವಿಷಯಗಳು ತಡೆಯುವುದಕ್ಕಾಗಿ ದೇಶದಲ್ಲಿ ಆದಷ್ಟು ಬೇಗನೆ ಸಮಾನ ನಾಗರೀಕ ಕಾನೂನು ಜಾರಿಗೊಳಿಸುವುದು ಆವಶ್ಯಕವಾಗಿದೆ !
  • ಅಲಿಗಡ ಮುಸ್ಲಿಂ ಕಾಲೇಜ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜ್ ಮುಂತಾದ ಇಸ್ಲಾಮಿ ಕಾಲೇಜುಗಳಲ್ಲಿ ಹಿಂದೂ, ಕ್ರೈಸ್ತ, ಮುಂತಾದವರಿಗೆ ಧಾರ್ಮಿಕ ಕೃತಿಗಳು ಮಾಡಲು ಈ ರೀತಿಯ ಸ್ವತಂತ್ರ ಕೋಣೆಗಳು ಎಂದಾದರೂ ನೀಡಿದ್ದಾರೆಯೆ ?

 

ಉದ್ದೇಶಪೂರ್ವಕವಾಗಿ ಅರಾಜಕತೆ ನಿರ್ಮಾಣ ಮಾಡುವ ಪ್ರಯತ್ನ ! – ಭಾಜಪ

ನಮಾಜಗಾಗಿ ಕಾಲೇಜುಗಳಲ್ಲಿ ಕೋಣೆ ಉಪಲಬ್ಧ ಮಾಡಿ ಕೊಡುವ ಮುಸಲ್ಮಾನ ವಿದ್ಯಾರ್ಥಿಗಳ ಆಗ್ರಹಕ್ಕೆ ಭಾಜಪ ಕೂಡ ವಿರೋಧಿಸಿದೆ. ಭಾಜಪದ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಇವರು, ‘ಎಕ್ಸ’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ, ಕೇರಳದಲ್ಲಿನ ಹಿಂದೂ ಮತ್ತು ಕ್ರೈಸ್ತ ಸಂಸ್ಥೆಗಳಲ್ಲಿ ಅರಾಜಕತೆ ನಿರ್ಮಾಣ ಮಾಡಲು ಉದ್ದೇಶಪೂರ್ವಕ ಪ್ರಯತ್ನ ಮಾಡಲಾಗುತ್ತಿದೆ. ಕಾಲೇಜುಗಳಲ್ಲಿನ ಪ್ರಾಧ್ಯಾಪಕರಿಗೆ ಬೆದರಿಕೆ ನೀಡಿ ಕಾಂಗ್ರೆಸ್ ಮತ್ತು ಎಡಪಂಥಿಯ ಸಂಘಟನೆ ಇವುಗಳಿಂದ ಇವರ ನಿಜವಾದ ಮುಖ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸರಕಾರ ತನ್ನ ನಿಲುವು ಸ್ಪಷ್ಟ ಗೊಳಿಸಬೇಕು, ಎಂದು ಭಾಜಪ ಆಗ್ರಹಿಸಿದೆ.