RSS Ban Removed : ಸರಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಲ್ಲಿ ಸೇರಲು ಹೇರಲಾಗಿದ್ದ ನಿಷೇಧವನ್ನು 58 ವರ್ಷಗಳ ಬಳಿಕ ಹಿಂಪಡೆ !

  • ಕೇಂದ್ರ ಸರ್ಕಾರದ ಶ್ಲಾಘನೀಯ ನಿರ್ಣಯ !

  • ಅಂದಿನ ಪ್ರಧಾನಿ ಇಂದಿರಾಗಾಂಧಿ ಈ ನಿಷೇಧ ಹೇರಿದ್ದರು !

ನವದೆಹಲಿ – ಕೇಂದ್ರ ಸರಕಾರವು ಸರಕಾರಿ ನೌಕರರ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಭಾಗವಹಿಸುವುದಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆದಿದೆ. 1966ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಈ ನಿಷೇಧವನ್ನು ಹೇರಿದ್ದರು. ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯಿಂದ ಹೊರಡಿಸಲಾಗಿರುವ ಈ ಆದೇಶದಲ್ಲಿ, ಸರಕಾರಿ ನೌಕರರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿರುವ ಆದೇಶಗಳ ಪಟ್ಟಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಕೈಬಿಡಲಾಗಿದೆ. ನವೆಂಬರ್ 30, 1966, ಜುಲೈ 25, 1970 ಮತ್ತು ಅಕ್ಟೋಬರ್ 28, 1980 ಈ ಮೂರು ದಿನಗಳಂದು ಹೊರಡಿಸಲಾದ ಸರಕಾರಿ ಆದೇಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ರಾದಥ ಅಮಿತ್ ಮಾಳವೀಯ ಅವರು ಪೋಸ್ಟ್ ಮಾಡಿ, ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ’58 ವರ್ಷಗಳ ಹಿಂದೆ, ಅಂದರೆ 1966 ರಲ್ಲಿ, ಅಂದಿನ ಸರಕಾರವು ಹೊರಡಿಸಿದ್ದ, ಸರಕಾರಿ ನೌಕರರು ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಸಂವಿಧಾನ ವಿರೋಧಿ ಆದೇಶವನ್ನು ಮೋದಿ ಸರಕಾರವು ಹಿಂಪಡೆದಿದೆ. ಆಗ ಹೊರಡಿಸಿದ್ದ ಆದೇಶವೇ ತಪ್ಪಾಗಿತ್ತು. ನವೆಂಬರ 7, 1966 ರಂದು ಸಂಸತ್ತಿನ ಪರಿಸರದಲ್ಲಿ ಗೋಹತ್ಯೆ ವಿರೋಧಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಆಗ ಬೃಹತ್ ಸಂಖ್ಯೆಯಲ್ಲಿ ರಾಷ್ಟ್ರೀಯ ಸ್ವಯಂ ಸಂಘ ಮತ್ತು ಜನ ಸಂಘದ ಬೆಂಬಲಿಗರು ಭಾಗವಹಿಸಿದ್ದರು. ಆ ಸಮಯದಲ್ಲಿ ಪೊಲೀಸರ ಗುಂಡಿನ ದಾಳಿಯಲ್ಲಿ ಅನೇಕ ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಜಾರಿಗೊಳಿಸಲಾಗಿತ್ತು.

ಸಂಪಾದಕೀಯ ನಿಲುವು

ಇತರರನ್ನು ಸರ್ವಾಧಿಕಾರಿಗಳೆಂದು ಕರೆಯುವ ಕಾಂಗ್ರೆಸ್ ಸ್ವತಃ ಎಂತಹ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ? ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.

`ನೌಕರವರ್ಗದವರು ಈಗ ಅರ್ಧ ಚಡ್ಡಿಯಲ್ಲಿ ತಿರುಗಾಡಬಹುದಂತೆ !’ – ಕಾಂಗ್ರೆಸ್

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸರಕಾರದ ಈ ನಿರ್ಣಯವನ್ನು ಟೀಕಿಸುತ್ತಾ, ಕಾಂಗ್ರೆಸ್ ಸರಕಾರವು ಸರಕಾರಿ ನೌಕರರು ಸಂಘದಲ್ಲಿ ಸಹಭಾಗಿಯಾಗುವುದನ್ನು ತಡೆಯಲು ಹೇರಿದ್ಧ ನಿರ್ಬಂಧವು ಯೋಗ್ಯವಾಗಿತ್ತು ಎಂದು ಹೇಳಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಅವಧಿಯಲ್ಲಿಯೂ ಈ ನಿಷೇಧವನ್ನು ಮುಂದುವರಿಸಲಾಗಿತ್ತು; ಆದರೆ ಈಗ ಈ ನಿಷೇಧವನ್ನು ಹಿಂಪಡೆದಿರುವುದರಿಂದ ನೌಕರವರ್ಗದವರು ಈಗ ಅರ್ಧ ಚಡ್ಡಿಯಲ್ಲಿ ತಿರುಗಾಡಬಹುದು ಎಂದು ಟೀಕಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥರಾದ ಸುನೀಲ್ ಆಂಬೇಕರ್ ಅವರು ಮಾತನಾಡಿ, ‘ಸಂಘವು ಕಳೆದ 99 ವರ್ಷಗಳಿಂದ ರಾಷ್ಟ್ರ ಪುನರ್ನಿರ್ಮಾಣ ಮತ್ತು ಸಮಾಜ ಸೇವೆಗಾಗಿ ಶ್ರಮಿಸುತ್ತಿದೆ. ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ಸಮಗ್ರತೆಗೆ ಕೊಡುಗೆ ನೀಡಿದೆ. ಆದ್ದರಿಂದ ಈ ನಿಷೇಧವನ್ನು ತೆಗೆದುಹಾಕುವ ಸರಕಾರದ ನಿರ್ಧಾರವು ಯೋಗ್ಯವಾಗಿದ್ದು, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಹೇಳಿಕೆಯಿಂದ ಕಾಂಗ್ರೆಸ್ಸಿನ ಮಾನಸಿಕತೆ ಗಮನಕ್ಕೆ ಬರುತ್ತದೆ ! ಗಾಂಧಿ ಟೋಪಿ ಧರಿಸುವ ಕಾಂಗ್ರೆಸ್ಸಿನಿಂದಾಗಿ ದೇಶದ ಅವನತಿಯಾಗಿದೆ ಎಂಬುದನ್ನು ರಾಷ್ಟ್ರವು ಗಮನಿಸಿದೆ !