‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಕುರಿತು ಅಸಾದುದ್ದೀನ್ ಓವೈಸಿ ಕೆಂಡಾಮಂಡಲ !
ಮುಂಬಯಿ – ರಾಜ್ಯ ಸರಕಾರವು ‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಘೋಷಿಸಿದ ನಂತರ, ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇವರು ಕಿಡಿಕಾರಿದ್ದಾರೆ. ಅವರು ಎಕ್ಸನಲ್ಲಿ, “139 ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದ ಕೇವಲ 2 ಪವಿತ್ರ ಸ್ಥಳಗಳು, ಕೆಲವು ಗುರುದ್ವಾರಗಳು ಮತ್ತು ಚರ್ಚ್‌ಗಳು ಸೇರಿವೆ. ಉಳಿದಂತೆ ಹೆಚ್ಚಿನ ತೀರ್ಥಕ್ಷೇತ್ರಗಳು ಹಿಂದೂಗಳದ್ದಾಗಿವೆ. ಇದು ಓಲೈಸುವಿಕೆಯಲ್ಲವೇ?” ಎಂದು ಹೇಳಿದ್ದಾರೆ.
ಈ ಯೋಜನೆಯಡಿ, 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ದೇಶದ 66 ಯಾತ್ರಾಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಈ ಯೋಜನೆ ಆದಾಯ ತೆರಿಗೆ ಪಾವತಿದಾರರಿಗೆ ಅಥವಾ ವಾರ್ಷಿಕ ಆದಾಯ ಎರಡೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಇರುವವರಿಗೆ ಅನ್ವಯಿಸುವುದಿಲ್ಲ.
ಸಂಪಾದಕೀಯ ನಿಲುವು
|