|
ಉಜ್ಜಯಿನಿ (ಮಧ್ಯಪ್ರದೇಶ) – ನಗರದ ‘ವಿಕ್ರಮ ವಿಶ್ವವಿದ್ಯಾಲಯ’ದಲ್ಲಿ ಫಾರ್ಮಸಿ ವಿಭಾಗದ ಪ್ರಾಧ್ಯಾಪಕನಾದ ಅನೀಶ ಶೇಖ್ ಎಂಬವನು ಹಿಂದೂ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿನಲ್ಲಿ ಸೇರಿಸಿಕೊಂಡು ಅವರಿಗೆ ನಮಾಜ ಪಠಣ ಮತ್ತು ಮುಸ್ಲಿಂ ಧರ್ಮವನ್ನು ಸ್ವೀಕರಿಸುವುದರ ಪ್ರಯೋಜನಗಳ ಬಗ್ಗೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪ್ರೊ. ಶೇಖ್ ನನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸುವಂತೆ ಕೋರಿದ್ದಾರೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಪ್ರೊ. ಶೇಖ್ ನನ್ನು 15 ದಿನಗಳ ಕಾಲ ಹುದ್ದೆಯಿಂದ ಪದಚ್ಯುತಗೊಳಿಸಲಾಗಿದೆ.
‘ಫಾರ್ಮಸಿ ವಿಭಾಗದ ಪ್ರಾಧ್ಯಾಪಕ ಅನೀಶ ಶೇಖ್ ವಿದ್ಯಾರ್ಥಿಗಳ ಜೊತೆ ತಾರತಮ್ಯ ಮಾಡುತ್ತಾನೆ. ಅವನು ರಸಾಯನಶಾಸ್ತ್ರದಲ್ಲಿನ ಮುಸ್ಲಿಂ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ನೀಡುತ್ತಾನೆ; ಹಿಂದೂ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡುತ್ತಾನೆ ಅಥವಾ ಅನುತ್ತೀರ್ಣಗೊಳಿಸುತ್ತಾನೆ’ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು. ಕಾರ್ಯಕರ್ತರು ಫಾರ್ಮಸಿ ವಿಭಾಗದ ಬಾಗಿಲಿಗೆ ಬೀಗ ಜಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮುಖ್ಯ ಕಾರ್ಯದರ್ಶಿ ಆದರ್ಶ ಚೌಧರಿ ಮಾತನಾಡಿ, ವಿದ್ಯೆಯ ಮಂದಿರದಲ್ಲಿ ಈ ರೀತಿ ಧರ್ಮ ಬೋಧನೆ ಮಾಡುವುದು ತಪ್ಪಾಗಿದೆ ಎಂದು ಖಂಡಿಸಿದರು.
ಸೌಜನ್ಯ : ಅಮರ್ ಉಜಾಲ
ತನಿಖೆಯ ನಂತರ ಕ್ರಮ ಕೈಗೊಳ್ಳುತ್ತೇವೆ! – ಉಪಕುಲಪತಿವಿಶ್ವವಿದ್ಯಾಲಯದ ಉಪಕುಲಪತಿ ಅಖಿಲೇಶ್ ಕುಮಾರ ಮಾತನಾಡಿ, ಈ ಪ್ರಕರಣದಲ್ಲಿ ಒಂದು ತನಿಖಾ ತಂಡ ರಚಿಸಲಾಗುವುದು. ಈ ತನಿಖಾ ತಂಡದಿಂದ ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳ ಆರೋಪ ನಿಜವೆಂದು ಕಂಡುಬಂದರೆ ಆರೋಪಿ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. |