ಅತ್ಯಂತ ಹಿರಿಯ ಸಂಸದರ ನೇಮಕ ಮಾಡಲಾಗುತ್ತದೆ !

ನವ ದೆಹಲಿ – ಜೂನ್ 24 ರಿಂದ ಸಂಸತ್ತಿನಲ್ಲಿ 18 ನೇ ಲೋಕಸಭೆಯ ಮೊದಲ ಅಧಿವೇಶನ ನಡೆಯುತ್ತಿದ್ದು, ಲೋಕಸಭೆ ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆ ನಡೆಯಲಿದೆ. ಇದಕ್ಕೂ ಮುನ್ನ ಜೂನ್ 20 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆಯ ಅತ್ಯಂತ ಹಿರಿಯ ಸಂಸದ ಬಿಜೆಪಿಯ ಭರ್ತ್ರಿಹರಿ ಮಹತಾಬ್ ಅವರನ್ನು ‘ಪ್ರಾಟೆಂ ಸ್ಪೀಕರ್’ (ಲೋಕಸಭೆಯ ಸ್ಪೀಕರ್ ಚುನಾವಣೆಗೆ ಮೊದಲು ನೇಮಕಗೊಂಡ ತಾತ್ಕಾಲಿಕ ಸ್ಪೀಕರ್) ಆಗಿ ನೇಮಿಸಿದರು. ಮಹತಾಬ್ ಅವರು ಹೊಸದಾಗಿ ಆಯ್ಕೆಯಾದ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಭರ್ತ್ರಿಹರಿ ಮಹತಾಬ್ ಅವರು ಕಟಕ್ (ಒಡಿಶಾ) ನಿಂದ 7 ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಬಿಜು ಜನತಾದಳ ಪಕ್ಷವನ್ನು ತೊರೆದು ಮಾರ್ಚ್ 2024 ರಲ್ಲಿ ಬಿಜೆಪಿ ಸೇರಿದರು. 2017 ರಲ್ಲಿ ಅವರಿಗೆ ‘ಅತ್ಯುತ್ತಮ ಸಂಸದೀಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!