ದಕ್ಷಿಣ ಮುಂಬಯಿನಿಂದ 4 ಬಾಂಗ್ಲಾದೇಶೀ ಮಹಿಳೆಯರನ್ನು ಬಂಧಿಸಿದ ಪೊಲೀಸರು !

ಬಾಂಗ್ಲಾದೇಶಿ ನುಸುಳುಕೋರರ ತವರೂರಾಗಿರುವ ಮುಂಬಯಿ !

ಮುಂಬಯಿ – ದಕ್ಷಿಣ ಮುಂಬಯಿನ ಗಿರ್ಗಾಂವ್, ಗ್ರಾಂಟ್ ರೋಡ್ ಮತ್ತು ಗಾವದೇವಿ ಪ್ರದೇಶದಲ್ಲಿ ವಾಸಿಸುತ್ತಿದ್ದ 4 ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಮಹಿಳೆ ಕಳೆದ 15 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಕೆಲಸ ಅರಸಿ ಬಾಂಗ್ಲಾದೇಶದಿಂದ ಭಾರತಕ್ಕೆ ಓಡಿ ಹೋಗಿದ್ದಳು. (ಕೆಲಸ ಹುಡುಕಿಕೊಂಡು ಮುಂಬಯಿನಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಹುಡುಕಬೇಕು! – ಸಂಪಾದಕರು) ನಿಯಮಾನುಸಾರ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಈ ನಾಲ್ವರು ಮಹಿಳೆಯರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುವುದು.