Lok Sabha Session : ಜೂನ್ 24ರಿಂದ ಲೋಕಸಭೆಯ ಮೊದಲ ಅಧಿವೇಶನ !

ನವದೆಹಲಿ – 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರಿಂದ ಆರಂಭವಾಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಜೂನ್ 12 ರಂದು ಈ ಘೋಷಣೆ ಮಾಡಿದರು. ಮೊದಲ 3 ದಿನಗಳಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಹಾಗೂ ಲೋಕಸಭೆಯ ಅಧ್ಯಕ್ಷರ(ಸ್ಪೀಕರ್) ಆಯ್ಕೆ ನಡೆಯಲಿದೆ. ಈ ಅಧಿವೇಶನ ಜುಲೈ 3 ರಂದು ಮುಗಿಯಲಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಜೂನ್ 27 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ರಾಷ್ಟ್ರಪತಿಗಳ ಧನ್ಯವಾದ ಪ್ರಸ್ತಾಪದ ಮೇಲೆ ಚರ್ಚೆ ನಡೆಯಲಿದೆ. ಧನ್ಯವಾದ ಪ್ರಸ್ತಾಪದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡಲಿದ್ದಾರೆ ಎಂದು ಕಿರಣ್ ರಿಜಿಜು ಅವರು ‘ಎಕ್ಸ್’ನ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.