ನಾರಾಯಣಪುರ – ಪೊಲೀಸರ ಗೂಢಚಾರ ಎಂಬ ಸಂದೇಹದಿಂದ ಶಾಲೂರಾಮ ಪೊಟಾಯಿ ಹೆಸರಿನ ಓರ್ವ 45 ವರ್ಷದ ವ್ಯಕ್ತಿಯನ್ನು ನಕ್ಸಲರು ಮನೆಯ ಹೊರಗೆ ಎಳೆದು ಹತ್ಯೆ ಮಾಡಿದ್ದಾರೆ. ಈ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ನಕ್ಸಲರು ಈ ಪ್ರದೇಶದ ಅಭಿವೃದ್ಧಿಯನ್ನು ತಡೆಹಿಡಿಯಲು ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಲು ಹತಾಶೆಯಿಂದ ಅಮಾಯಕ ನಾಗರಿಕರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸಿಕ್ಕಿರುವ ಅಧಿಕೃತ ಮಾಹಿತಿಯ ಪ್ರಕಾರ, 15 ರಿಂದ 20 ಶಸ್ತ್ರಸಜ್ಜಿತ ನಕ್ಸಲೀಯರು ಶಾಲುರಾಮ್ ಪೋಟಾಯಿ ಅವರ ಮನೆಯನ್ನು ಸುತ್ತುವರೆದು ಅವರನ್ನು ಮನೆಯಿಂದ ಹೊರಗೆ ಎಳೆದೊಯ್ದು ಕುಟುಂಬಸ್ಥರ ಮತ್ತು ಸ್ಥಳೀಯರ ಮುಂದೆಯೇ ಅಮಾನವೀಯವಾಗಿ ಥಳಿಸಿ ಕೊಲೆ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ಘಟನಾಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಮಾವೋವಾದಿಗಳ ‘ಕುತುಲ್ ಏರಿಯಾ ಸಮಿತಿ’ ಕರಪತ್ರಗಳನ್ನು ಪ್ರಸಾರ ಮಾಡಿ, ಪೊಟಾಯಿ ಪೊಲೀಸರ ಗೂಢಚಾರ ಎಂದು ಕೆಲಸ ಮಾಡುತ್ತಿದ್ದನು’, ಎಂದು ಹೇಳಲಾಗಿದೆ.