ನಮ್ಮ ಸರಕಾರವನ್ನು ಉರುಳಿಸಲು ವಿರೋಧಿಗಳಿಂದ ಮಾಟ-ಮಂತ್ರ ಪ್ರಯೋಗ ! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರ ಆರೋಪ

ಬೆಂಗಳೂರು – ನಮ್ಮ ಸರಕಾರವನ್ನು ಉರುಳಿಸಲು ವಿರೋಧ ಪಕ್ಷಗಳು ಮಾಟ-ಮಂತ್ರ ಮಾಡುತ್ತಿವೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಆರೋಪಿಸಿದ್ದಾರೆ. ‘ಪ್ರಸಾರ ಮಾಧ್ಯಮಗಳು ರಾಜರಾಜೇಶ್ವರಿ ದೇವಸ್ಥಾನದ ಹತ್ತಿರದ ಪರಿಶೀಲನೆ ಮಾಡಿದರೇ ಅವರಿಗೆ ಸತ್ಯ ತಿಳಿಯುವುದು’ ಎಂದು ಅವರು ಕರೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಶಿವಕುಮಾರ ಯಾವುದೇ ಪಕ್ಷ ಅಥವಾ ನಾಯಕರ ಹೆಸರನ್ನು ತೆಗೆದುಕೊಂಡಿಲ್ಲ.

ಶಿವಕುಮಾರ ತಮ್ಮ ಮಾತನ್ನು ಮುಂದುವರಿಸಿ, ವಿರೋಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ವಿರುದ್ಧ ಮಾಟ –ಮಂತ್ರದ ಪ್ರಯೋಗ ಮಾಡಿ ಶತ್ರು ಭೈರವಿ ಯಾಗವನ್ನು ಮಾಡಿದ್ದಾರೆ. ಕೇರಳದ ತಾಂತ್ರಿಕರ ಸಹಾಯದಿಂದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಒಂದು ನಿರ್ಜನ ಸ್ಥಳದಲ್ಲಿ ಮಾಟಮಂತ್ರಗಳ ವಿಧಿಗಳನ್ನು ನಡೆಸಲಾಯಿತು. ಈ ವಿಧಿಯಲ್ಲಿ ಪ್ರಾಣಿಗಳ ಬಲಿ ನೀಡಲಾಯಿತು. ಅಘೋರಿ ಯಾಗದಲ್ಲಿ 21 ಆಡುಗಳು, 3 ಎಮ್ಮೆಗಳು, 21 ಕಪ್ಪು ಕುರಿಗಳು ಮತ್ತು 5 ಹಂದಿಗಳನ್ನು ಬಲಿ ನೀಡಲಾಗಿದೆ. ಶತ್ರುವನ್ನು ಸಂಪೂರ್ಣವಾಗಿ ನಾಶಮಾಡಲು ಈ ಯಾಗದಲ್ಲಿ ಪಂಚಬಲಿ (5 ವಿಧದ ಬಲಿಗಳನ್ನು) ನೀಡಲಾಗುತ್ತದೆ. ನಾನು ನನ್ನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟಿದ್ದೇನೆ. ದುಷ್ಟ ಕಣ್ಣುಗಳಿಂದ ನನ್ನನ್ನು ರಕ್ಷಿಸಿಕೊಳ್ಳಲು ನಾನು ರಕ್ಷಾಕವಚವನ್ನು ಧರಿಸಿದ್ದೇನೆ. ನಮಗೆ ದೇವರ ಮೇಲೆ ಅಪಾರ ನಂಬಿಕೆ ಇದೆ, ಜನರ ಆಶೀರ್ವಾದ ನಮ್ಮೊಂದಿಗೆ ಇರುವುದರಿಂದ ನಾವು ಅದರಿಂದ ರಕ್ಷಣೆ ಪಡೆಯುತ್ತೇವೆ ಎನ್ನುವ ವಿಶ್ವಾಸ ನಮಗಿದೆ. ‘ಇಂತಹ ಮೂಢನಂಬಿಕೆಯ ಮೇಲೆ ನಿಮಗೆ ನಂಬಿಕೆಯಿದೆಯೇ ?’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅವರು ವಿರೋಧ ಪಕ್ಷಗಳು ನಮಗೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದರೂ, ನಮಗೆ ಯಾವ ಶಕ್ತಿಯ ಮೇಲೆ ವಿಶ್ವಾಸವಿದೆಯೋ, ಆ ಶಕ್ತಿ ನಮ್ಮನ್ನು ರಕ್ಷಿಸುವುದು. ನಮ್ಮ ವಿರುದ್ಧ ಯಾವುದೇ ಪ್ರಯೋಗ ಮಾಡಲಿ, ಒಂದೇ ಶಕ್ತಿ ಅದರ ಮೇಲೆ ನಮಗೆ ನಂಬಿಕೆ ಇದೆ ಹಾಗೂ ಅದೇ ನಮಗೆ ಕಾಪಾಡಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ವೇಳೆ ಇದು ಸತ್ಯವಿದ್ದರೆ, ಶಿವಕುಮಾರ್ ಇಂತಹವರ ಮೇಲೆ ಏಕೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ?