ಬೈಕ್ ಗೆ ಕಾರು ತಾಗಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮುಸಲ್ಮಾನರಿಂದ ಹಿಂದೂವಿನ ಮೇಲೆ ಹಲ್ಲೆ !

ಮಂಡ್ಯ – ದ್ವಿಚಕ್ರ ವಾಹನವನ್ನು ‘ಓವರ್ ಟೇಕ್’ ಮಾಡುವಾಗ ಅದಕ್ಕೆ ತಾಗಿರುವುದರಿಂದ ದ್ವಿಚಕ್ರ ವಾಹನಸವಾರ ಅಭಿಲಾಷ ಇವರು ಕಾರಿನ ಚಾಲಕ ಮುಸಲ್ಮಾನ ಯುವಕನಿಗೆ ಪ್ರಶ್ನಿಸಿದ್ದಕ್ಕೆ ೧೦ -೧೨ ಮುಸಲ್ಮಾನ ಯುವಕರ ಗುಂಪು ಅಭಿಲಾಷ ಇವರ ಮೇಲೆ ಹಲ್ಲೆ ನಡೆಸಿದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಮುಸಲ್ಮಾನರು ಕೆಲವು ಹಿಂದೂಗಳ ಮನೆಗೆ ನುಗ್ಗಿ ಬೆದರಿಸಿದ್ದಾರೆ.

ಈ ದಾಳಿಯಲ್ಲಿ ಗಾಯಗೊಂಡಿರುವ ಅಭಿಲಾಷನನ್ನು ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಂದು ಕಡೆ ಈ ಮುಸಲ್ಮಾನರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇದಕ್ಕಾಗಿ ಗ್ರಾಮಸ್ಥರು ಬೆಳ್ಳೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪೊಲೀಸ ಠಾಣೆಯಲ್ಲಿ ಬಿಗುವಿನ ವಾತಾವರಣ ನೋಡಿ ಪೊಲೀಸ ಆಯುಕ್ತರು ಅಲ್ಲಿಗೆ ಬಂದು ಗ್ರಾಮಸ್ಥರಿಗೆ ತಿಳಿಸಿ ಹೇಳಿದರು.

ಸಂಪಾದಕೀಯ ನಿಲುವು

ಇದು ಭಾರತಾದ್ಯಂತ ಗ್ರಾಮ ಗ್ರಾಮಗಳಲ್ಲಿರುವ ಹಿಂದುಗಳ ಅವಸ್ಥೆ ! ಇದರ ಬಗ್ಗೆ ಯಾರು ಏಕೆ ಮಾತನಾಡುವುದಿಲ್ಲ ?