ಪುಣೆಯ ಸಸೂನ್ ಆಸ್ಪತ್ರೆಯಲ್ಲಿನ ನಕಲಿ ಪ್ರಮಾಣಪತ್ರ ಹಂಚಿಕೆ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ !

  • 2 ವರ್ಷ ಕಳೆದರೂ ತನಿಖಾ ಸಮಿತಿ ಇನ್ನೂ ವರದಿ ಸಲ್ಲಿಸಿಲ್ಲ !

  • ರಾಜ್ಯದ ನಕಲಿ ದಿವ್ಯಾಂಗ ಪ್ರಮಾಣಪತ್ರದ ಮೂಲಕ ಅನರ್ಹ ವ್ಯಕ್ತಿ ಸರಕಾರಿ ಸವಲತ್ತುಗಳನ್ನು ಪಡೆಯುವ ಸಾಧ್ಯತೆ

  • ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಸಮನ್ವಯಕ ಶ್ರೀ. ಅಭಿಷೇಕ ಮುರುಕಟೆಯವರು ಪಡೆದ ಮಾಹಿತಿಯಿಂದ ಬಹಿರಂಗ !

ಮುಂಬಯಿ, ಮೇ 24 (ಸುದ್ದಿ) – ಮೇ 2022 ರಲ್ಲಿ, ಪುಣೆಯ ಸಸೂನ್ ಆಸ್ಪತ್ರೆಯ ಮೂಳೆಚಿಕಿತ್ಸಕ ವಿಭಾಗದ ಕೆಲವು ಅಧಿಕಾರಿಗಳು ನಕಲಿ ದಿವ್ಯಾಂಗ ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂಬ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸುರಾಜ್ಯ ಅಭಿಯಾನದ ಸಮನ್ವಯಕ ಶ್ರೀ. ಅಭಿಷೇಕ ಮುರುಕಟೆ

ಈ ಪ್ರಕರಣದ ವಿಚಾರಣೆಗಾಗಿ ಜೂನ್ 2022 ರಲ್ಲಿ ಸರಕಾರವು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ; ಆದರೆ 2 ವರ್ಷ ಕಳೆದರೂ, ತನಿಖಾ ವರದಿಯನ್ನು ಬಹಿರಂಗಪಡಿಸದಿರುವುದು ಆಘಾತಕಾರಿ ವಿಷಯವನ್ನು ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಸಮನ್ವಯಕ ಶ್ರೀ. ಅಭಿಷೇಕ ಮುರುಕಟೆಯವರು ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಪಡೆದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ತಪ್ಪಿತಸ್ಥ ವೈದ್ಯಕೀಯ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆಯೇ ? ಎನ್ನುವ ಪ್ರಶ್ನೆ ನಿರ್ಮಾಣವಾಗಿದೆ.

‘ಈ ಪ್ರಕರಣದ ವಿಚಾರಣಯ ವರದಿಯನ್ನು ಸಲ್ಲಿಸಬೇಕು’, ಎಂದು ಸರಕಾರದ ವತಿಯಿಂದ ವೈದ್ಯಕೀಯ ಶಿಕ್ಷಣ ವಿಭಾಗವು 2022ರ ಜುಲೈ ಮತ್ತು ಅಕ್ಟೋಬರ್‌ನಲ್ಲಿ ಎರಡು ಬಾರಿ ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ಆಯುಕ್ತರಿಗೆ ಪತ್ರಗಳನ್ನು ಕಳುಹಿಸಿದೆ; ಆದರೆ ಇದುವರೆಗೂ ತನಿಖಾ ವರದಿ ಸಲ್ಲಿಕೆಯಾಗಿಲ್ಲ. ಈ ಪ್ರಕರಣದಲ್ಲಿ ಪ್ರಥಮ ಶಾಸಕ ಬಚ್ಚು ಕಡು ಇವರ ಪ್ರಹಾರ ಸಂಘಟನೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಈ ದೂರಿನ ಮೇಲೆ ಜೂನ್ 1, 2022 ರಂದು ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯಕ್ಕೆ ಪತ್ರ ಬರೆದು ನಕಲಿ ಪ್ರಮಾಣಪತ್ರದ ಮರು ಪರಿಶೀಲನೆಯ ಬಗ್ಗೆ ಸೂಚನೆ ನೀಡಿತು. ಈ ಪ್ರಕರಣದ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿ, ನಕಲಿ ಪ್ರಮಾಣಪತ್ರವನ್ನು ನೀಡುವ ಅಧಿಕಾರಿಗಳ ಹೆಸರುಗಳನ್ನು ಸರಕಾರಕ್ಕೆ ಹಾಜರು ಪಡಿಸುವ ಸೂಚನೆಗಳನ್ನು ನೀಡಲಾಗಿದೆ; ಆದರೆ ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಮುಂದಿನ ಕ್ರಮ ಕೈಗೊಂಡಿಲ್ಲ, ಎನ್ನುವ ವಾಸ್ತವಿಕ ಮಾಹಿತಿ ಪ್ರಾಧಿಕಾರದಿಂದ ಬಹಿರಂಗವಾಗಿದೆ.

ಸಂಪಾದಕೀಯ ನಿಲುವು

ಇದರಲ್ಲಿ ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !