Statement by Nitin Gadkari: ಭಾರತದಲ್ಲಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನಾಯಕರ ಕೊರತೆ ! – ಕೇಂದ್ರ ಸಚಿವ ನಿತಿನ್ ಗಡಕರಿ

ಚಂಡೀಗಢ(ಪಂಜಾಬ) – ಇಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡಕರಿಯವರು ಮಾತನಾಡುವಾಗ ದೊಡ್ಡ ಹೇಳಿಕೆ ನೀಡಿದ್ದಾರೆ ಅವರು, ಭಾರತದಲ್ಲಿ ಹಣದ ಕೊರತೆಯಿಲ್ಲ ಬದಲಾಗಿ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ನಾಯಕರ ಕೊರತೆಯಿದೆಯೆಂದು ಹೇಳಿದ್ದಾರೆ.

ನಿತಿನ ಗಡಕರಿಯವರು ತಮ್ಮ ಮಾತನ್ನು ಮುಂದುವರಿಸಿ, ನಾನು 1995 ರಲ್ಲಿ ಶಿವಸೇನೆ-ಭಾಜಪ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದೆನು. ಮುಂಬಯಿಯ ವರ್ಲಿ-ವಾಂದ್ರೆ ಸೀ ಲಿಂಕ್ ನಿರ್ಮಿಸುವ ಸೌಭಾಗ್ಯ ಸಿಕ್ಕಿತ್ತು. ನಾನು ಮುಂಬಯಿಯಲ್ಲಿ 55 ಸೇತುವೆಗಳನ್ನು ನಿರ್ಮಿಸಿದೆನು. ಮುಂಬಯಿ-ಪುಣೆ ಎಕ್ಸಪ್ರೆಸ್ ವೇ ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದೆನು. ಆಗ ನನ್ನ ಖಾತೆಗೆ ಹಣಕಾಸಿನ ಕೊರತೆಯಿತ್ತು. ಆ ವೇಳೆ ರಿಲಯನ್ಸ್ ಸಂಸ್ಥೆಯ 3 ಸಾವಿರ 600 ಕೋಟಿ ರೂಪಾಯಿಗಳ ಟೆಂಡರನ್ನು ನಾನು ರದ್ದುಗೊಳಿಸಿದೆನು. ಇಂದು ಅದರ ಬೆಲೆ 40 ಸಾವಿರ ಕೋಟಿ ರೂಪಾಯಿಗಳಷ್ಟಾಗಿದೆ, ನಾನು ಆ ಟೆಂಡರನ್ನು ರದ್ದು ಮಾಡಿದನಂತರ ತುಂಬಾ ವಿವಾದವಾಯಿತು. ನಾವು ಶೇರು ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಿದೆವು. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಂತಹ ಸಂಸ್ಥೆಯನ್ನು ರಚಿಸಿದೆ. ನಾವು 650 ಕೋಟಿ ಸಂಗ್ರಹಿಸಲು ಹೋಗಿದ್ದೆವು; ಆದರೆ ನಮಗೆ 1 ಸಾವಿರ 150 ಕೋಟಿ ರೂಪಾಯಿ ಸಿಕ್ಕಿತು ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಈ ಒಂದು ಪ್ರಸಂಗದಿಂದ ನಾನು ದೇಶದಲ್ಲಿ ಹಣದ ಕೊರತೆಯಿಲ್ಲ ಎಂದು ಅರಿವಾಯಿತು. ನಾನು ಕೇಂದ್ರದಲ್ಲಿ ಸಚಿವನಾಗಿದ್ದಾಗ ಇಲ್ಲಿಯವರೆಗೆ 50 ಲಕ್ಷ ಕೋಟಿ ರೂಪಾಯಿಗಳಷ್ಟು ಕಾರ್ಯವನ್ನು ಮಾಡಿದ್ದೇನೆ. ಆದರೂ ಇನ್ನೂ 20 ರಿಂದ 25 ಲಕ್ಷ ಕೋಟಿ ರೂಪಾಯಿಗಳ ಕೆಲಸವನ್ನು ನಾನು ಮಾಡಬಹುದಾಗಿತ್ತು; ಆದರೆ ಅದಾಗಲಿಲ್ಲ. ಇದರ ಬಗ್ಗೆ ನನ್ನ ಮನಸ್ಸಿನಲ್ಲಿ ವಿಷಾದವಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಭಾರತದ ನಾಯಕರ ಸ್ಥಿತಿಯಾಗಿದೆ ! ಇದರಿಂದ ಭಾರತದಲ್ಲಿ ನಾಯಕರಲ್ಲ, ಬದಲಾಗಿ ನಿಃಸ್ವಾರ್ಥ ಸಂತರೇ ದೇಶವನ್ನು ಮುನ್ನಡೆಸಬಲ್ಲರು ಎನ್ನುವುದನ್ನು ಗಮನದಲ್ಲಿಡಬೇಕು !