Vibhav Kumar Arrested : ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಸಚಿವ ವಿಭವಿ ಕುಮಾರ್ ಬಂಧನ !

ಮುಖ್ಯಮಂತ್ರಿಗಳ ನಿವಾಸದಲ್ಲಿ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಥಳಿಸಿದ ಪ್ರಕರಣ

ನವದೆಹಲಿ – ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಅವರ ನಿವಾಸ ಸ್ಥಾನದಲ್ಲಿ ಥಳಿಸಿರುವ ಪ್ರಕರಣದಲ್ಲಿ ಪೊಲೀಸರು ಕೇಜ್ರಿವಾಲ್ ಅವರ ಸಚಿವ ವಿಭವ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಸಂಸದೆ ಮಲಿವಾಲ್ ಅವರ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವರದಿಯಲ್ಲಿ ೨ ಛಾಯಾ ಚಿತ್ರಗಳ ಸಹಿತ ಸ್ವಾತಿ ಅವರ ಕಣ್ಣುಗಳ ಮೇಲೆ ಮತ್ತು ಕಾಲುಗಳ ಮೇಲೆ ಗಾಯಗಳ ಗುರುತು ಇರುವುದಾಗಿ ನಮೂದಿಸಲಾಗಿದೆ. ದೆಹಲಿಯ ಪೊಲೀಸರು ಏಮ್ಸ್ ಆಸ್ಪತ್ರೆಯಲ್ಲಿ ಮಲಿವಾಲ್ ಅವರ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಮೇ ೧೩ ರಂದು ಈ ಥಳಸಿರುವ ಘಟನೆ ನಡೆದಿದೆ.

ಮಲಿವಾಲ್ ಅವರ ವಿರುದ್ಧ ಕೂಡ ದೂರು ದಾಖಲು

ವಿಭವ್ ಕುಮಾರ್ ಅವರು ಸಂಸದೆ ಸ್ವಾತಿ ಮಲಿವಾಲ್ ಅವರ ವಿರುದ್ಧ ದೂರು ನೀಡಿದ್ದು, ಸ್ವಾತಿ ಅವರು ಮುಖ್ಯಮಂತ್ರಿಗಳ ನಿವಾಸ ಸ್ಥಾನದಲ್ಲಿ ಬಲವಂತವಾಗಿ ಪ್ರವೇಶಿಸಿದ್ದರು ಮತ್ತು ಅವರನ್ನು ತಡೆದಾಗ ಗಲಾಟೆ ನಡೆಸಿದರು, ಹಾಗೂ ಸಿಬ್ಬಂದಿಗಳಿಗೆ ಬೈಗುಳ ಬೈದಿದ್ದಾರೆ ಎಂದು ವಿಭವ್ ದೂರಿನಲ್ಲಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮುಖ್ಯಮಂತ್ರಿಗಳ ಮನೆಯಲ್ಲೇ ಮಹಿಳೆಯರು ಸುರಕ್ಷಿತವಿಲ್ಲ ಎಂದಾದರೆ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಪರಿಸ್ಥಿತಿ ಹೇಗಿರಬಹುದು, ಎಂಬುದರ ಯೋಚನೆ ಮಾಡದಿರುವುದೇ ಒಳ್ಳೆಯದು !