ಭಾರತವನ್ನು ತನ್ನ ಕೈಬೆರಳಲ್ಲಿ ಆಡಿಸಬಹುದು ಎಂದು ಪಾಶ್ಚಾತ್ಯ ದೇಶಗಳಿಗೆ ಅನಿಸುತ್ತದೆ !

ವಿದೇಶಿ ಪ್ರಸಾರ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ವಿದೇಶಾಂಗ ಸಚಿವ ಡಾ. ಜೈ ಶಂಕರ !

ವಿದೇಶಾಂಗ ಸಚಿವ ಡಾ. ಜೈ ಶಂಕರ

ಕೋಲಕಾತಾ (ಬಂಗಾಲ) – ಕಳೆದ ೨೦೦ ವರ್ಷಗಳಿಂದ ನಾವು ಜಗತ್ತನ್ನು ಆಳುತ್ತಿದ್ದೇವೆ ಎಂದು ಪಾಶ್ಚಾತ್ಯ ದೇಶಗಳಿಗೆ ಅನಿಸುತ್ತದೆ, ಭಾರತವನ್ನು ಕೈಬೆರಳಲ್ಲಿ ಆಡಿಸಬೇಕೆಂಬ ಆಸೆಯಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈ ಶಂಕರ ಅವರು ಭಾರತದಲ್ಲಿನ ಚುನಾವಣೆಯ ಕುರಿತು ಹೇಳಿಕೆ ನೀಡುವ ವಿದೇಶಿ ಪ್ರಸಾರ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು. ಯಾವ ದೇಶದ ಚುನಾವಣೆಯ ತೀರ್ಪಿಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆಯೋ ಅಂತಹ ದೇಶವೀಗ ಭಾರತಕ್ಕೆ ಚುನಾವಣೆ ನಡೆಸುವ ಬಗ್ಗೆ ಬುದ್ಧಿವಾದ ಹೇಳುತ್ತಿದೆ ಎಂದು ಜೈ ಶಂಕರ ಕಟುವಾಗಿ ಹೇಳಿದರು. ಡಾ. ಜೈಶಂಕರ ಅವರ ‘ವ್ಹಾಯ್ ಇಂಡಿಯಾ ಮ್ಯಾಟರ್ಸ್’ ಈ ಪುಸ್ತಕದ ಬಂಗಾಲಿ ಆವೃತ್ತಿಯ ಪ್ರಕಾಶನದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರ ನೀಡುತ್ತಿದ್ದರು. ಈ ವೇಳೆ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಜೈ ಶಂಕರ ಮಾತು ಮುಂದುವರೆಸಿ,

೧ . ಭಾರತದ ಅಧಿಕಾರವನ್ನು ಕೆಲವೇ ಕೆಲವು ಜನರ ಕೈಯಲ್ಲಿ ನೀಡಬೇಕು ಎಂಬುದು ಪಶ್ಚಿಮಾತ್ಯ ಪ್ರಸಾರ ಮಾಧ್ಯಮಗಳ ಆಸೆಯಾಗಿದೆ ಮತ್ತು ಯಾವಾಗ ಹಾಗೆ ನಡೆಯುವುದಿಲ್ಲವೋ ಆಗ ಅವರಿಗೆ ಅದು ಹಿಡಿಸುವುದಿಲ್ಲ. ಮಾಧ್ಯಮಗಳು ತಮ್ಮ ಚುನಾವಣೆಯ ವಾರ್ತಾ ಸಂಕಲನದಲ್ಲಿ ಕೆಲವು ಜನರಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತವೆ.

೨ . ಪಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಕಳೆದ ೨೦೦ ವರ್ಷಗಳಿಂದ ಅಧಿಕಾರದ ಆಟ ಆಡುತ್ತಿವೆ. ಅಲ್ಲಿನ ಮಾಧ್ಯಮದವರು ಅನುಭವಸ್ಥರು ಮತ್ತು ಜಾಣರಾಗಿದ್ದಾರೆ. ಅವರು ಭಾರತದ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಹಬ್ಬಿಸುತ್ತಾರೆ; ಅವರ ನಂಬಿಕೆಯನ್ನು ಅನುಸರಿಸಲು ಭಾರತ ತಯಾರಿಲ್ಲ.

ಪಾಕಿಸ್ತಾನ ವ್ಯಾಪಿತ ಕಾಶ್ಮೀರದಲ್ಲಿ ಜನರು ಜಮ್ಮು ಕಾಶ್ಮೀರದ ಜೊತೆಗೆ ತುಲನೆ ಮಾಡುತ್ತಾರೆ !

ಜೈ ಶಂಕರ ಮಾತು ಮುಂದುವರಿಸುತ್ತಾ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರಸ್ತುತ ಅಶಾಂತ ವಾತಾವರಣವಿದೆ. ಅಲ್ಲಿ ವಾಸಿಸುವ ಜನರು ಅವರ ಇಂದಿನ ಪರಿಸ್ಥಿತಿ ಜಮ್ಮು ಕಾಶ್ಮೀರದಲ್ಲಿನ ಜನರ ಜೊತೆಗೆ ಹೋಲಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿನ ಜನರ ಅಭಿವೃದ್ಧಿಯಾಗುತ್ತಿದೆ ಆದರೆ ನಾವು ಮಾತ್ರ ಹಿಂದಿದ್ದೇವೆ ಎಂಬುದು ಅಲ್ಲಿನ ಜನರಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲಿನ ಜನರ ಜೊತೆ ಕೆಟ್ಟದಾಗಿ ವರ್ತಿಸಲಾಗುತ್ತಿದೆ ಮತ್ತು ಅವರು ಗುಲಾಮರಂತೆ ಜೀವನ ನಡೆಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಇಂದಿಗೂ ಭಾರತದ್ದೇ ಆಗಿದೆ ಎಂದರು.

ಅಮೇರಿಕ ಕೂಡ ಚಾಬಹಾರ ಯೋಜನೆಯ ಕೌತುಕ ಮಾಡಿದೆ !

ಚಾಬಹಾರ ಬಂದರ ಒಪ್ಪಂದದ ಮೇಲೆ ನಿಷೇದ ಹೇರುವುದಕ್ಕಾಗಿ ಅಮೇರಿಕಾದ ಬೆದರಿಕೆಯ ಬಗ್ಗೆ ಜೈ ಶಂಕರ ಮಾತನಾಡಿ, ಈ ಯೋಜನೆಯಿಂದ ಸಂಪೂರ್ಣ ಅಲ್ಲಿನ ಭೂಭಾಗಕ್ಕೆ ಲಾಭವಾಗುವುದು. ಅದರ ದೊಡ್ಡ ಪ್ರಮಾಣದ ಪರಿಣಾಮದ ಕಡೆಗೆ ಜನರು ಗಮನ ನೀಡಬೇಕು. ಈ ಹಿಂದೆ ಅಮೇರಿಕ ಕೂಡ ಚಾಬಹಾರ ಬಂದರ ಯೋಜನೆ ಬಗ್ಗೆ ಅನೇಕ ಬಾರಿ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದು ಜೈಶಂಕರ ನುಡಿದರು.