ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಹಬಾನೋ ಪ್ರಕರಣದಂತೆ, ಶ್ರೀರಾಮ ಮಂದಿರದ ನಿರ್ಣಯವನ್ನು ಬದಲಾಯಿಸುತ್ತೇವೆ !

ರಾಹುಲ್ ಗಾಂಧಿಯವರು ಹಿಂದೆ ಒಂದು ಸಭೆಯಲ್ಲಿ ಹೇಳಿರುವ ಬಗ್ಗೆ ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಇವರ ದಾವೆ !

ರಾಹುಲ್ ಗಾಂಧಿ (ಎಡಬದಿಗೆ) ಮತ್ತು ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ

ಸಂಭಲ (ಉತ್ತರ ಪ್ರದೇಶ) – ಸರ್ವೋಚ್ಚ ನ್ಯಾಯಾಲಯವು ಶ್ರೀರಾಮ ಮಂದಿರದ ತೀರ್ಪು ನೀಡಿದಾಗ, ರಾಹುಲ ಗಾಂಧಿಯವರು ತಮ್ಮ ಆಪ್ತ ನಾಯಕರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಅವರು, `ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದ ಬಳಿಕ ನಾವು ಶ್ರೀರಾಮಮಂದಿರದ ತೀರ್ಪನ್ನು ಬದಲಾಯಿಸೋಣ. ಇದಕ್ಕಾಗಿ ನಾವು ಒಂದು ಶಕ್ತಿಶಾಲಿ ಸಮಿತಿಯನ್ನು (ಸೂಪರ ಪವರ ಕಮಿಟಿ) ಸ್ಥಾಪಿಸೋಣ. ಯಾವ ರೀತಿ ಶಾಹಬಾನೋ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ರಾಜೀವ ಗಾಂಧಿಯವರು ಕಾನೂನು ರಚಿಸಿದರೋ, ಅದೇ ರೀತಿ ನಾವು ಶ್ರೀರಾಮಮಂದಿರದ ಮೇಲಿನ ತೀರ್ಪನ್ನು ರದ್ದುಗೊಳಿಸೋಣ’, ಎಂದು ಹೇಳಿದ್ದರೆಂದು ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಹೇಳಿದ್ದಾರೆ. ಶ್ರೀ ಕಲ್ಕಿ ಧಾಮದ ಪೀಠಾಧೀಶ್ವರ ಆಚಾರ್ಯ ಪ್ರಮೋದ ಕೃಷ್ಣಂ ಇವರು 32 ವರ್ಷಗಳ ಕಾಲ ಕಾಂಗ್ರೆಸ್ಸಿನ ನಾಯಕರಾಗಿದ್ದರು.

ಆಚಾರ್ಯ ಕೃಷ್ಣಂ ತಮ್ಮ ಮಾತನ್ನು ಮುಂದುವರಿಸಿ,

1. ರಾಹುಲ್ ಗಾಂಧಿ ಮತ್ತು ಅವರ ಗುಂಪು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದೆ.
2. ಹಿಂದಿನ ಕಾಂಗ್ರೆಸ್ ಮತ್ತು ಈಗಿನ ಕಾಂಗ್ರೆಸ್ ನಡುವೆ ಬಹಳ ವ್ಯತ್ಯಾಸಗಳಿವೆ. ನಾನು 32 ವರ್ಷಗಳ ವರೆಗೆ ಕಾಂಗ್ರೆಸ್‌ನಲ್ಲಿದ್ದೆನು.
3. ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಅದು ಸ್ಥಾಪನೆಯಾದಾಗ, ಅದರಲ್ಲಿ ದೇಶಭಕ್ತ ನಾಯಕರಿದ್ದರು. ಆ ಸಮಯದಲ್ಲಿ ಅವರು ದೇಶವನ್ನು ಜೋಡಿಸುವ ಕಾರ್ಯವನ್ನು ಮಾಡಿದ್ದರು.
4. ರಾಹುಲ್ ಗಾಂಧಿ ಮತ್ತು ಅವರ ಆಪ್ತರು ದೇಶದಲ್ಲಿ ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶದ ಹೆಸರಿನಲ್ಲಿ ಪ್ರತ್ಯೇಕಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಇಂತಹ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಜೂನ್ 4ರ ನಂತರ ಕಾಂಗ್ರೆಸ್ ಇಬ್ಭಾಗವಾಗಲಿದೆ !

ಜೂನ್ 4 ರಂದು ಲೋಕಸಭೆ ಚುನಾವಣೆಯ ತೀರ್ಪು ಹೊರಬರಲಿದೆ. ಈ ಕುರಿತು ಆಚಾರ್ಯ ಕೃಷ್ಣಂ ಮಾತನಾಡಿ, ಜೂನ್ 4ರ ನಂತರ ಕಾಂಗ್ರೆಸ್ ಇಬ್ಭಾಗವಾಗಲಿದೆ. ಒಂದು ಭಾಗ ರಾಹುಲ್ ಗಾಂಧಿಯವರದ್ದು, ಇನ್ನೊಂದು ಭಾಗ ಪ್ರಿಯಾಂಕಾ ವಡ್ರಾ ಅವರದ್ದು ಆಗಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಮನದಲ್ಲಿ ಜ್ವಾಲಾಮುಖಿ ಧಗಧಗಿಸುತ್ತಿದ್ದು, ಜೂನ್ 4ರ ನಂತರ ಅದು ಸ್ಫೋಟಗೊಳ್ಳಲಿದೆ. ಪ್ರಿಯಾಂಕಾ ವಡ್ರಾ ಜೊತೆ ಸೇರಿ ಸಂಚು ರೂಪಿಸಲಾಗಿದೆ. ಅವರನ್ನು ಪಕ್ಷದ ಅಧ್ಯಕ್ಷರಾಗದಂತೆ ಮತ್ತು ರಾಜ್ಯಸಭೆಗೆ ಹೋಗದಂತೆ ತಡೆಯಲಾಗುತ್ತಿದೆ. ಅವರಿಗೆ ಯಾವುದೇ ಮಹತ್ವದ ಜವಾಬ್ದಾರಿ ನೀಡಿಲ್ಲ. ರಾಹುಲ್ ಗಾಂಧಿಯವರ ಗುಂಪಿನವರ ಆಶಯದಂತೆ ಪ್ರಿಯಾಂಕಾ ರಾಜಕೀಯದಿಂದ ಹೊರಬರಬೇಕು ಎಂದಾಗಿದೆ. ಇದರಿಂದ ಪ್ರಿಯಾಂಕಾ ಬೆಂಬಲಿಗರು ಬೇಸರಗೊಂಡಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಯಾವಾಗಲೂ ಪರಕೀಯರಂತೆ ನಡೆಸಿಕೊಂಡಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಮೇಲಿನ ಈ ಹೇಳಿಕೆಯಲ್ಲಿ ಸತ್ಯ ಕಂಡುಬಂದರೆ ಆಶ್ಚರ್ಯ ಪಡಬಾರದು !