ಗುರು ಗ್ರಂಥ ಸಾಹಿಬ್ ಹರಿದು ಹಾಕಿದ ಆರೋಪ !

ಚಂಡೀಗಢ – ಪಂಜಾಬನ ಫಿರೋಜಪುರದ ಬಾಬಾ ಬೀರ್ ಸಿಂಗ್ ಗುರುದ್ವಾರದಲ್ಲಿ ಇರಿಸಲಾಗಿದ್ದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ್ದಕ್ಕಾಗಿ 19 ವರ್ಷದ ಬಕ್ಷೀಸ್ ಸಿಂಗ್ ಎಂಬ ಯುವಕನನ್ನು ಗುಂಪೊಂದು ಥಳಿಸಿದೆ. ಗುಂಪಿನಲ್ಲಿನ ಕೆಲವರು ಆರೋಪಿ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದರು. ಗಂಭೀರವಾಗಿ ಗಾಯಗೊಂಡ ಬಕ್ಷೀಸ್ ಸಿಂಗ್ ನನ್ನ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ಯುವಕ ಪ್ರಾಣಬಿಟ್ಟನು. ಬಾಲಕನ ಸಾವಿನ ನಂತರ ಆತನ ತಂದೆ ಲಖವಿಂದರ್ ಸಿಂಗ್ ಮಾತನಾಡಿ ‘ನನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದ. ಬಕ್ಷೀಸ್ ಸಿಂಗ್ ಹಂತಕರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಎಂದು ಆಗ್ರಹಿಸಿದರು. ಪೊಲೀಸ್ ಇಲಾಖೆ ಈ ಘಾಟ್ನಎಯ ತನಿಖೆ ನಡೆಸುತ್ತಿದೆ.
ಈ ಘಟನೆ ಬಗ್ಗೆ ಶಿರೋಮಣಿ ಗುರುದ್ವಾರ ನಿರ್ವಹಣಾ ಸಮಿತಿಯು (ಎಸ್. ಜಿ.ಪಿ.ಸಿ) ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮೃತ ಯುವಕನ ಕುಟುಂಬದ ಮೇಲೆ ಸಾಮಾಜಿಕ ಮತ್ತು ಧಾರ್ಮಿಕ ಬಹಿಷ್ಕಾರವನ್ನು ಘೋಷಿಸಿದೆ. ಯಾವುದೇ ಗುರುದ್ವಾರದಲ್ಲಿ ಬಕ್ಷೀಸ್ ಸಿಂಗ್ ಅಂತ್ಯಸಂಸ್ಕಾರ ಮಾಡದಂತೆ ಎಸ್.ಜಿ.ಪಿ.ಸಿ ಆದೇಶ ಹೊರಡಿಸಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!