Rahul Slams PM Modi : ದ್ವಾರಕೆಯ ಸಮುದ್ರದಡಿ ಹೋಗುವಾಗ ಅವನು ಎಷ್ಟು ಗಾಬರಿಯಾಗಿದ್ದನು – ರಾಹುಲ್ ಗಾಂಧಿ

ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ಟೀಕಿಸಿದ ರಾಹುಲ್ ಗಾಂಧಿ !

ಪುಣೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಸಭ್ಯ ಶಬ್ದಗಳಲ್ಲಿ ಟೀಕಿಸಿದರು. ಪ್ರಧಾನಿಯನ್ನು ಏಕವಚನದಲ್ಲಿ ಸಂಭೋದಿಸಿ ಮಾತನಾಡಿದ ರಾಹುಲ್, ನರೇಂದ್ರ ಮೋದಿ ಕೆಲವೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾನೆ, ಕೆಲವೊಮ್ಮೆ ಸಮುದ್ರದ ಕೆಳಗೆ ಹೋಗಿ ನಾಟಕ ಮಾಡುತ್ತಾನೆ. ಸಮುದ್ರದ ಕೆಳಗೆ ಹೋಗುವಾಗ ಅವನು ಎಷ್ಟೊಂದು ಹೆದರಿದ್ದನೆಂದು ನೀವು ನೋಡಿರಬಹುದು! ಎಂದರು.

ಪ್ರಧಾನಿ ಮೋದಿ ಅವರು ಫೆಬ್ರವರಿ 2024 ರಲ್ಲಿ ದ್ವಾರಕೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಸಮುದ್ರದ ಅಡಿಯಲ್ಲಿ ಹೋಗಿ ದ್ವಾರಕಾ ನಗರದ ದರ್ಶನ ಪಡೆದಿದ್ದರು. ಅಂದಿನ ವಿಡಿಯೋಗಳು ಎಲ್ಲೆಡೆ ಪ್ರಸಾರವಾಗಿದ್ದವು.

ಸಂಪಾದಕೀಯ ನಿಲುವು

ಪ್ರಧಾನಿಯವರನ್ನು ಕೆಳಸ್ತರದಲ್ಲಿ ಟೀಕಿಸುವುದು ಗಾಂಧಿ ಅವರ ನಿಜಸ್ವರೂಪವನ್ನೇ ತೋರಿಸುತ್ತಿದೆ !