ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ 2 ಪ್ರಾಧ್ಯಾಪಕರ ಅಮಾನತು !
ಜೌನ್ಪುರ (ಉತ್ತರ ಪ್ರದೇಶ) – ವೀರ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿದ್ಯಾಲಯದ ‘ಫಾರ್ಮಸಿ’ ಪದವಿ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಮತ್ತು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಈ ಕ್ರಿಕೆಟ್ ಆಟಗಾರರ ಹೆಸರನ್ನು ಬರೆದಿದ್ದರು. ವಿಚಿತ್ರವೆಂದರೆ, ಈ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ. ಈ ಪ್ರಕರಣದಲ್ಲಿ ವಿದ್ಯಾಪೀಠದ ಆಡಳಿತವು 2 ಪ್ರಾಧ್ಯಾಪಕರ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ. ವಿದ್ಯಾಪೀಠದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ.
In #UttarPradesh, 4 students who wrote #JaiShreeRam and cricketers’ names in their answer scripts pass the Pharmacy degree exams
2 professors who valued the answer scripts suspended
This matter came to light through information obtained by former student Divyanshu Singh under… pic.twitter.com/wAOnnkLNoS
— Sanatan Prabhat (@SanatanPrabhat) April 28, 2024
ಉತ್ತರ ಪತ್ರಿಕೆ ತಪಾಸಣೆಯು ದೋಷಪೂರಿತವಾಗಿರುವ ಬಗ್ಗೆ ದಿವ್ಯಾಂಶು ಅವರು ರಾಜಭವನಕ್ಕೆ ಲಿಖಿತವಾಗಿ ದೂರು ನೀಡಿದ್ದರು. ಆ ನಂತರ ಸೆಪ್ಟೆಂಬರ್ 21, 2023 ರಂದು ರಾಜಭವನವು ತನಿಖೆಗೆ ಆದೇಶಿಸಿತು. ವಿದ್ಯಾಪೀಠದ ಆಡಳಿತವು ತನಿಖಾ ಸಮಿತಿಯನ್ನು ನೇಮಿಸಿತು. ಈ ವಿಚಾರಣೆಯಲ್ಲಿ 2 ಪ್ರಾಧ್ಯಾಪಕರು ತಪ್ಪಿತಸ್ಥರೆಂದು ನಿರ್ಧರಿಸಲಾಯಿತು. ಅದರ ಪ್ರಕಾರ ಡಾ. ಅಶುತೋಷ್ ಗುಪ್ತಾ ಮತ್ತು ಡಾ. ವಿನಯ್ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿದ್ಯಾಪೀಠದ ಕುಲಪತಿ ಡಾ. ವಂದನಾ ಸಿಂಗ್ ತಿಳಿಸಿದ್ದಾರೆ.