ವಕ್ಫ್ ಬೋರ್ಡ್ ನ ೫೦ ವರ್ಷಗಳ ಹೋರಾಟ !
ಭಾಗ್ಯನಗರ (ತೆಲಂಗಾಣ) – ಕಳೆದ ೫೦ ವರ್ಷಗಳಿಂದ ವಕ್ಫ್ ಬೋರ್ಡ್ ನಿಂದ ಪ್ರಸಿದ್ಧ ಫೈವ್‌ಸ್ಟಾರ್ ಹೋಟೆಲ್ ‘ಮ್ಯಾರಿಯಟ್’ ಅದರ ಜಾಗದಲ್ಲಿ ಕಟ್ಟಿದ್ದಾರೆ ಎಂದು ತೆಲಂಗಾಣ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಉಚ್ಚ ನ್ಯಾಯಾಲಯವು ಮಾತ್ರ ಹೋಟೆಲ್‌ಗೆ ಸಮಾಧಾನ ನೀಡುತ್ತಾ ವಕ್ಫ್ ಬೋರ್ಡಿನವ ಈ ದಾವೆ ಅಕ್ರಮವಾಗಿದೆ ಎಂದು ಹೇಳಿದೆ. ತೆಲಂಗಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅನಿಲ್ ಕುಮಾರ್ ಜುಕಾಂತಿ ವಿಭಾಗೀಯ ಪೀಠದ ಎದುರು ವಿಚಾರಣೆ ನಡೆಯಿತು.
೧೯೬೪ ರಲ್ಲಿ ಅಬ್ದುಲ್ ಗಪೂರ ಎಂಬ ವ್ಯಕ್ತಿ ಈ ಹೋಟಲಿನ ಮೇಲೆ ವಕ್ಫ್ ಬೋರ್ಡಿನ ಹಕ್ಕು ಇರುವುದಾಗಿ ಹೇಳಿ ಆ ಸಮಯದಲ್ಲಿ ‘ವಾಯ್ಸರಾಯ’ ಎಂದು ಗುರುತಿಸುವ ಆ ಹೋಟಲಿನ ವಿರುದ್ಧ ‘ವಕ್ಫ್ ಕಾನೂನ ೧೯೫೪’ ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ವಕ್ಫ್ ಬೋರ್ಡಿನಿಂದ ಸುಮಾರು ೫೦ ವರ್ಷ ಈ ಪ್ರಕರಣ ಕಾನೂನಿನ ಗೊಂದಲದಲ್ಲಿ ಸಿಲುಕಿಸಿದ್ದರು. ೨೦೧೪ ರಲ್ಲಿ ಬೋರ್ಡಿನಿಂದ ಹೋಟೆಲ್ ಮಾರಿಯಟ್ ಗೆ ಸಮಾಚಾರ ಪತ್ರದಲ್ಲಿ ನೋಟಿಸ್ ನೀಡಿ ಕಾನೂನಿನ ಕ್ರಮ ಕೈಗೊಳ್ಳುವ ಬೆದರಿಕೆ ನೀಡಿತು.
ವಕ್ಫ್ ಬೋರ್ಡಿನ ಕಾನೂನಿನ ಕ್ರಮದ ಬೆದರಿಕೆಯ ಬಗ್ಗೆ ಹೋಟೆಲ್ ಮಾರಿಯಟ್ ಸಂಚಾಲಕರು ಕೂಡ ನ್ಯಾಯಾಲಯದಲ್ಲಿ ಸವಾಲು ಹಾಕಿದ್ದರು. ಈ ಉತ್ತರದಲ್ಲಿ ವಕ್ಫ್ ಬೋರ್ಡ್ ನ್ಯಾಯಾಲಯದ ಹಳೆಯ ಆದೇಶದ ಉಲ್ಲಂಘನೆ ಮಾಡಿರುವುದಾಗಿ ಅಂಶ ಇರಿಸಿದ್ದರು. ಕಡೆಗೆ ಈ ಪ್ರಕರಣ ಉಚ್ಚ ನ್ಯಾಯಾಲಯಕ್ಕೆ ತಲುಪಿತು. ನ್ಯಾಯಾಲಯವು ವಕ್ಫ್ ಬೋರ್ಡಿನ ಮನವಿ ಆರಂಭದಿಂದಲೂ ಅಕ್ರಮ ಎಂದು ಹೇಳುತ್ತಾ ಕೊನೆಗೆ ಅದನ್ನು ತಿರಸ್ಕರಿಸಿತು.
ಸಂಪಾದಕೀಯ ನಿಲುವುಆಸುರಿ ‘ವಕ್ಫ್ ಕಾನೂನು ೧೯೯೫’ ರ ಮರೆಯಿಂದ ಭಾರತದ ಇಸ್ಲಾಮಿಕರಣ ಮಾಡುವ ಅಟ್ಟಹಾಸ ಯಾವ ರೀತಿ ನಡೆಸುತ್ತಾರೆ, ಇದು ಇದರ ಒಂದು ಉದಾಹರಣೆ ಅಷ್ಟೇ ! ಆದ್ದರಿಂದ ಈಗ ವಕ್ಫ್ ಕಾನೂನು ರದ್ದುಗೊಳಿಸಲು ಪ್ರಯತ್ನ ಮಾಡಬೇಕು ! |