ನವ ದೆಹಲಿ – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ವು, 1984 ರಿಂದ ಹಿಮಾಲಯದ ಮಂಜುಗಡ್ಡೆ ಸರೋವರಗಳಲ್ಲಿ 27 ಪ್ರತಿಶತಕ್ಕಿಂತ ಹೆಚ್ಚು ಗಣನೀಯವಾಗಿ ವಿಸ್ತಾರ ಆಗಿವೆ ಎಂದಿದೆ. ಈ 676 ಸರೋವರಗಳಲ್ಲಿ 130 ಭಾರತದಲ್ಲಿವೆ. ಉಪಗ್ರಹಗಳ ಮೂಲಕ ಪಡೆದ ಮಾಹಿತಿಯಿಂದ ಇದು ಬಹಿರಂಗವಾಗಿದೆ.
10 ಹೆಕ್ಟೇರ್‌ಗಿಂತ ದೊಡ್ಡದಾದ 2 ಸಾವಿರದ 431 ಸರೋವರಗಳಲ್ಲಿ, 676 ಮಂಜುಗಡ್ಡೆ ಸರೋವರಗಳು 1984 ರಿಂದ ಗಣನೀಯವಾಗಿ ವಿಸ್ತಾರಗೊಂಡಿವೆ. ಅವುಗಳಲ್ಲಿ 601 ಸರೋವರಗಳ ವಿಸ್ತರಣೆ ಎರಡು ಪಟ್ಟು ಆಗಿದ್ದರೆ, ಉಳಿದ ಸರೋವರಗಳ ವಿಸ್ತರಣೆ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.
A huge 27% expansion in the lakes of the Himalayan glaciers – #ISRO
If these lakes breach, then there could be large-scale flooding leading to significant damage.
Considering this, the government needs to take preventive measures from now itself#GlobalWarming#ClimateChange… pic.twitter.com/r4SEcL5rVa
— Sanatan Prabhat (@SanatanPrabhat) April 23, 2024
ಸಂಪಾದಕೀಯ ನಿಲುವುಈ ಸರೋವರಗಳು ಒಡೆದರೆ ಅವುಗಳಲ್ಲಿನ ನೀರಿನಿಂದ ದೊಡ್ಡ ಪ್ರವಾಹ ಬಂದು ಅಪಾರ ಹಾನಿಯನ್ನುಂಟುಮಾಡಬಹುದು, ಎಂಬುದನ್ನು ಅರಿತು, ಸರಕಾರವು ಈಗಿನಿಂದಲೇ ಅದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು ! |