ಲವ್ ಜಿಹಾದ್ ಅಸ್ತಿತ್ವದಲ್ಲಿದೆ ! – ನೇಹಾಳ ತಂದೆ ನಿರಂಜನ ಹಿರೇಮಠ, ಕಾಂಗ್ರೆಸ್ ಕಾರ್ಪೊರೇಟರ್

  • ಮಗಳ ಹತ್ಯೆ ಮಾಡಿದಂತೆ ಫಯಾಜ್‌ನ ಕೊಲೆ ಮಾಡಿ – ನಿರಂಜನ ಹಿರೇಮಠ

  • ಲವ್ ಜಿಹಾದ್ ಒಪ್ಪದ ಗೃಹ ಸಚಿವ 

  • ರಾಜ್ಯದಲ್ಲಿ ಲವ್ ಜಿಹಾದ್ ಹಾವಳಿ

ಹುಬ್ಬಳ್ಳಿ – ಇತ್ತೀಚೆಗೆ ನೇಹಾ ಹಿರೇಮಠ್ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಫಿಯಾಜ್ ನು ಚಾಕುವಿನಿಂದ ಇರಿದು ಆಕೆಯ ಕೊಲೆ ಮಾಡಿದ್ದಾನೆ. ನೇಹಾದ ತಂದೆ ನಿರಂಜನ್ ಹಿರೇಮಠ್ ಕಾಂಗ್ರೆಸ್ ನಾಯಕ ಮತ್ತು ಕಾರ್ಪೊರೇಟರ್ ಆಗಿದ್ದಾರೆ. ಈ ಘಟನೆಯ ನಂತರ ರಾಜ್ಯದಲ್ಲಿ ವಾತಾವರಣ ಕಾವೇರಿದ್ದೂ, ಲವ್ ಜಿಹಾದ್ ವಿಚಾರಕ್ಕೆ ಹಿಂದೂಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಹಿರೇಮಠ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಇಂತಹ ಘಟನೆಗಳು ವೇಗವಾಗಿ ನಡೆಯುತ್ತಿವೆ. ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಈ ರೀತಿ ಯಾರಿಗೂ ಆಗಬಾರದು. ಲವ್ ಜಿಹಾದ್ ವೇಗವಾಗಿ ಹರಡುತ್ತಿದೆ ಎಂದು ನನಗೆ ಅನಿಸುತ್ತಿದೆ. ತಾಯಂದಿರು, ಸಹೋದರಿಯರು ಮನೆಯಿಂದ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.” ಎಂದು ನಿರಂಜನ ಹಿರೇಮಠ್ ಅವರು ಈ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಕರೆದರೂ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಇವರು ಇದನ್ನು ಲವ್ ಜಿಹಾದ್ ಅಲ್ಲ ಎಂದು ಹೇಳಿದ್ದಾರೆ.

‘ಎರಡೂ ಕಡೆಯ ಜನರು ನೇಹಾ ಹತ್ಯೆಯಲ್ಲಿ ಭಾಗಿಯಾಗಿಯಂತೆ !’ – ಜಿ. ಪರಮೇಶ್ವರ

ಜಿ. ಪರಮೇಶ್ವರ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಫಯಾಜ್ ನೇಹಾಗೆ ಇರಿದಿರಬಹುದು; ಯಾಕೆಂದರೆ ನೇಹಾ ಬೇರೆಯವರನ್ನು ಮದುವೆಯಾಗುತ್ತಾರೆ ಎಂದು ಅವನು ಭಾವಿಸಿರಬೇಕು. ಇದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ; ಆದರೆ ಈ ಪ್ರಕರಣದಲ್ಲಿ ಎರಡೂ ಕಡೆಯ ಜನರು ಭಾಗಿಯಾಗಿದ್ದರು. ಹಾಗಾಗಿ ಇದು ಲವ್ ಜಿಹಾದ್ ಪ್ರಕರಣವಲ್ಲ,’ ಎಂದರು.

ನನ್ನ ಮಗಳಿಗೆ ಆದಂತೆ, ಯಾರಿಗೂ ಆಗಬಾರದು ! – ನಿರಂಜನ ಹಿರೇಮಠ

ಸಂತ್ರಸ್ತೆಯ ತಂದೆ ನಿರಂಜನ ಹಿರೇಮಠ ಅವರು, ನಾನು ಎಲ್ಲಾ ತಾಯಂದಿರಲ್ಲಿ ಮನವಿ ಮಾಡುತ್ತೇನೆ, ನಿಮ್ಮ ಮಗಳು ಕಾಲೇಜಿಗೆ ಹೋದರೆ ಅವಳೊಂದಿಗೆ ಹೋಗಿ; ಯಾಕೆಂದರೆ ನನ್ನ ಮಗಳಿಗೆ ಆದಂತೆ, ಯಾರಿಗೂ ಆಗದಂತೆ ನೋಡಿಕೊಳ್ಳಿ. ಸುತ್ತಮುತ್ತಲಿನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಮತ್ತು ಇತರ ಎಲ್ಲ ನಾಯಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.