ಮುಸಲ್ಮಾನರಿಗೆ ಕಾನೂನಿನ ಬಗ್ಗೆ ಕಾಳಜಿ ಇಲ್ಲ; ನಾವು ಧಾರ್ಮಿಕ ಮುಖಂಡರ ಮಾತನ್ನು ಮಾತ್ರ ಕೇಳುತ್ತೇವೆ ! – ಇಂಡೋನೇಷಿಯನ್ ಉಲೇಮಾ ಕೌನ್ಸಿಲ್
(ಗ್ರೀನ್ ಇಸ್ಲಾಂ ಎಂದರೆ ಪರಿಸರ ಬಗ್ಗೆ ಜಾಗರೂಕರಾಗಿರುವ ಇಸ್ಲಾಂ)
(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವರು)

ಜಕಾರ್ತ (ಇಂಡೋನೇಷ್ಯಾ) – ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಸದ್ಯ ‘ಗ್ರೀನ್ ಇಸ್ಲಾಂ’ ಚಳುವಳಿ ಪ್ರಾರಂಭವಾಗಿದೆ. ಗ್ರೀನ್ ಇಸ್ಲಾಂ ಎಂದರೆ ‘ಪರಿಸರದ ಬಗ್ಗೆ ಜಾಗರೂಕವಾಗಿರುವ ಇಸ್ಲಾಂ’. ನಸರುದ್ದೀನ ಒಮರ ಅವರು ರಾಜಧಾನಿ ಜಕಾರ್ತಾದ ಇಸ್ತಿಕಲಾಲ ಮಸೀದಿಯ ಮುಖ್ಯ ಇಮಾಮ ಆಗಿದ್ದಾರೆ. ಅವರ ನೇತೃತ್ವದಲ್ಲಿ ಈ ಚಳವಳಿ ಪ್ರಾರಂಭವಾಯಿತು. ಅವರ ಭಾಷಣಗಳಲ್ಲಿ ಪರಿಸರವೇ ಮುಖ್ಯ ವಿಷಯವಾಗಿರುತ್ತದೆ. ಈ ಸಂದರ್ಭದಲ್ಲಿ, `ಇಂಡೋನೇಶಿಯನ್ ಉಲೇಮಾ ಕೌನ್ಸಿಲ್’ನ ಪರಿಸರ ಸಂರಕ್ಷಣೆಯ ಮುಖ್ಯಸ್ಥ ಹಾಯು ಪ್ರಬೋವೊ ಅವರು ಮಾತನಾಡಿ, (ಮುಸ್ಲಿಮರು) ಸಾರ್ವಜನಿಕ ನಿಯಮಗಳನ್ನು ಪಾಲಿಸುವುದಿಲ್ಲ. ಅವರಿಗೆ ಅದರ ಬಗ್ಗೆ ಕಾಳಜಿಯಿಲ್ಲ; ಆದರೆ ಧಾರ್ಮಿಕ ಮುಖಂಡರು ಹೇಳುವುದನ್ನು ಅವರು ಕೇಳುತ್ತಾರೆ; ಏಕೆಂದರೆ ನೀವು ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಆದರೆ ಅಲ್ಲಾ ಮಾಡಿರುವ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಧಾರ್ಮಿಕ ಮುಖಂಡರು ಹೇಳುತ್ತಾರೆ. ನಸ್ರುದ್ದೀನ ಒಮರ ಅವರ ಈ ಪ್ರಯತ್ನವನ್ನು ಅಂತರರಾಷ್ಟ್ರೀಯ ಸಮುದಾಯದ ದೃಷ್ಟಿಗೆ ಬಿದ್ದಿದೆ.
ಉಮರ ಅನೇಕಬಾರಿ ಎಚ್ಚರಿಕೆ ನೀಡುತ್ತಾ, ಮಾನವರಾಗಿ ನಮ್ಮ ಅತ್ಯಂತ ಅಪಾಯಕಾರಿ ದೋಷವೆಂದರೆ ನಾವು ಭೂಮಿಯನ್ನು ಕೇವಲ ಒಂದು ವಸ್ತುವನ್ನಾಗಿ ಪರಿಗಣಿಸುತ್ತೇವೆ. ನಾವು ಎಷ್ಟು ದುರಾಸೆ ಹೊಂದಿರುತ್ತೇವೆಯೋ, ಅಷ್ಟು ಬೇಗನೆ ಜಗತ್ತು ಅಂತ್ಯಗೊಳ್ಳುತ್ತದೆ. ಯಾವ ರೀತಿ ಮುಸಲ್ಮಾನರು ರಂಜಾನ ಸಮಯದಲ್ಲಿ ಉಪವಾಸ ಮಾಡುತ್ತಾರೆಯೋ, ಅದೇ ರೀತಿ ಅವರು ಭೂಮಿಯ ರಕ್ಷಣೆಯನ್ನು ತಮ್ಮ ಕರ್ತವ್ಯವೆಂದು ಪರಿಗಣಿಸಬೇಕು. ನಿತ್ಯ ನಮಾಜ್ ಮಾಡುವಂತೆ ನಿತ್ಯ ಗಿಡಗಳನ್ನು ಬೆಳೆಸುವ ರೂಢಿ ಕೂಡ ಮಾಡಿಕೊಳ್ಳಬೇಕು. ‘ಮುಸ್ಲಿಮರು ನಿಸರ್ಗದ ಕಾಳಜಿ ವಹಿಸಬೇಕು’ ಎನ್ನುವ ಪೈಗಂಬರ ಮಹಮ್ಮದರ ಸೂಚನೆಯನ್ನು ಪಾಲಿಸಬೇಕು ಎಂದು ಉಮರ ಕರೆ ನೀಡಿದರು.
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ