|
ಹುಬ್ಬಳ್ಳಿ – ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರ ಪುತ್ರಿಯನ್ನು ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ಏಪ್ರಿಲ್ 18 ರಂದು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಯುವಕನು ನೇಹಾ ಹಿರೇಮಠ್ (ವಯಸ್ಸು 23 ವರ್ಷ) ಇವಳ ಹೊಟ್ಟೆ ಮತ್ತು ಕುತ್ತಿಗೆಗೆ 7 ಬಾರಿ ಇರಿದಿದ್ದಾನೆ. ಆಸ್ಪತ್ರೆಗೆ ಸಾಗಿಸಿದ ನಂತರ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಯಿತು. ದಾಳಿಯ ನಂತರ ಆರೋಪಿ ಫೈಯಾಜ್ ಖೋಂಡುನಾಯಕ್ ಓಡಿ ಹೋಗುತ್ತಿದ್ದಾಗ ಕೆಲ ವಿದ್ಯಾರ್ಥಿಗಳು ಆತನನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನೇಹಾ ಈ ಕಾಲೇಜಿನ ‘ಎಂಸಿಎ’ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಆರೋಪಿ ಫಯಾಜ್ ಕೂಡ ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಬಿ.ಸಿ.ಎ ಅವಧಿಯಲ್ಲಿ ಇಬ್ಬರೂ ಸಹಪಾಠಿಗಳಾಗಿದ್ದರು. ಫೈಯಾಜ್‌ನ ಮದುವೆ ಪ್ರಸ್ತಾಪವನ್ನು ನೇಹಾ ತಿರಸ್ಕರಿಸಿದ್ದಳು, ಆದ್ದರಿಂದ ಅವನು ಅವಳನ್ನು ಕೊಂದನು.
ಈ ಪ್ರಕರಣದ ಕುರಿತು ನೇಹಾ ಅವರ ತಂದೆ ಹಿರೇಮಠ್ ಮಾತನಾಡಿ, ಆರೋಪಿಗಳು ನನ್ನ ಮಗಳನ್ನು ಮದುವೆ ಆಗುವಂತೆ ಕೇಳಿದ್ದರು; ಆದರೆ ಅವಳು ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಅವಳು ಈ ವಿಷಯಗಳಿಂದ ದೂರ ಉಳಿಯುತ್ತಿದ್ದಳು. ಇಬ್ಬರೂ ಬೇರೆ ಬೇರೆ ಧರ್ಮದವರು ಎಂದು ಆರೋಪಿಗೆ ನೇಹಾ ಹೇಳಿದ್ದಳು.
ಆರೋಪಿಗಳಿಗೆ ಹೆಚ್ಚಿನ ಶಿಕ್ಷೆಯಾಗುವಂತೆ ಪ್ರಯತ್ನಿಸುವೆವು ! – ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಘಟನೆ ಕುರಿತು ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ಇದು ಲವ್ ಜಿಹಾದ್ ಪ್ರಕರಣವಲ್ಲ ! – ಗೃಹ ಸಚಿವ ಡಾ. ಜಿ. ಪರಮೇಶ್ವರ
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಲವ್ ಜಿಹಾದ್ ಅಲ್ಲ. ಇದು ಕೇವಲ ಎರಡು ಧರ್ಮಗಳ ನಡುವೆ ನಡೆದ ಘಟನೆಯಾಗಿದೆ. ನೇಹಾ ಮೊದಲಿನಿಂದಲೂ ಫಯಾಜ್ ನನ್ನು ಪ್ರೀತಿಸುತ್ತಿದ್ದಳು. ಅವಳ ಮನೆಯವರು ಇದನ್ನು ಅರಿತಿದ್ದರು. ಮನೆಯವರು ಆಕೆಗೆ ವಿವರಿಸಿ ಇಲ್ಲಿಗೆ ನಿಲ್ಲಿಸುವಂತೆ ಹೇಳಿದರು. ಮನೆಯವರು ಹೇಳಿದ್ದನ್ನು ನೇಹಾ ಕೂಡ ಒಪ್ಪಿಕೊಂಡಳು; ಆದರೆ ಈ ವಿಚಾರವನ್ನು ಸಹಿಸದ ಯುವಕ ಆಕೆಯನ್ನು ಕೊಂದಿದ್ದಾನೆ. ಘಟನೆ ನಿಜವಾಗಿ ನಡೆದಿದ್ದು, ಆ ವೇಳೆ ನೇಹಾ ಅವರ ತಾಯಿ ಜೊತೆಗಿದ್ದರು. ಆಕೆಯ ಮೇಲೂ ದಾಳಿಯಾಯಿತು; ಆದರೆ ನೇಹಾ ತನ್ನ ತಾಯಿಯನ್ನು ರಕ್ಷಿಸಿದಳು. ಇದು ಲವ್ ಜಿಹಾದ್ ಪ್ರಕರಣವಲ್ಲ. “ನನ್ನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗುತ್ತೀರಾ?” ಈ ಸಿಟ್ಟಿನಿಂದ ಆತ ಕೊಲೆ ಮಾಡಿದ. ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಇವರು ಹೇಳಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂದು ಹೇಳುವ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳೇ ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನಿಸಿ ! ಮುಸ್ಲಿಂ ಯುವಕರು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಅವರಲ್ಲಿನ ಅಪರಾಧಿ ಮನೋವೃತ್ತಿ ನಾಶ ಆಗುವುದಿಲ್ಲ ಎಂಬುದು ಈ ಪ್ರಕರಣದಿಂದ ಗಮನಕ್ಕೆ ಬರುತ್ತದೆ ! |