ನವದೆಹಲಿ – ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ 2024ರ ಜನವರಿ ಮತ್ತು ಫೆಬ್ರವರಿ ನಡುವೆ ಕೇಂದ್ರ ಚುನಾವಣಾ ಆಯೋಗ ಒಟ್ಟು 7 ಸಾವಿರದ 502 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಆ ನಂತರ ಮಾರ್ಚ್ 1ರಿಂದ ಏಪ್ರಿಲ್ 13ರ ಅವಧಿಯಲ್ಲಿ ದೇಶಾದ್ಯಂತ 4 ಸಾವಿರದ 658 ಕೋಟಿ 13 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ, ಮದ್ಯ, ಡ್ರಗ್ಸ್ ಮತ್ತು ಬೆಲೆಬಾಳುವ ವಸ್ತುಗಳು ಸೇರಿವೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 12 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಜಪ್ತಿ ಮಾಡಲಾಗಿದೆ. ಅಂದರೆ, ಪ್ರತಿದಿನ ಸುಮಾರು 100 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. 75 ವರ್ಷಗಳ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದುವರೆಗಿನ ಅತಿ ದೊಡ್ಡ ಕ್ರಮವಾಗಿದೆ. ವಿಶೇಷವೆಂದರೆ 2019 ರಲ್ಲಿ ಇಡೀ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಯೋಗವು 3 ಸಾವಿರದ 475 ಕೋಟಿಗಳನ್ನು ವಶಪಡಿಸಿಕೊಂಡಿತ್ತು. ಈ ವರ್ಷ ಚುನಾವಣೆಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ.
ಮಾರ್ಚ್ 1 ರಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ 2 ಸಾವಿರದ 68 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಔಷಧಗಳು, 1 ಸಾವಿರದ 424 ಕೋಟಿ 49 ಲಕ್ಷ ರೂಪಾಯಿ ಮೌಲ್ಯದ ಉಚಿತ ಹಂಚುವ ವಸ್ತುಗಳು, 562 ಕೋಟಿ 10 ಲಕ್ಷ ರೂಪಾಯಿ ಮೌಲ್ಯದ ಲೋಹಗಳು, 489 ಕೋಟಿ 31 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮತ್ತು 395 ಕೋಟಿ 39 ಲಕ್ಷ ರೂಪಾಯಿ ಮೌಲ್ಯದ ನಗದುಗಳ ಸಮಾವೇಶವಿದೆ.
1. ತಮಿಳುನಾಡಿನಲ್ಲಿ ಎಲ್ಲಕ್ಕಿಂತ ಹೆಚ್ಚು 53 ಕೋಟಿ ರೂಪಾಯಿ, ತೆಲಂಗಾಣದಲ್ಲಿ 49 ಕೋಟಿ ರೂಪಾಯಿ, ಮಹಾರಾಷ್ಟ್ರದಲ್ಲಿ 40 ಕೋಟಿ ರೂಪಾಯಿ ಮತ್ತು ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ತಲಾ 35 ಕೋಟಿ ರೂಪಾಯಿಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.
2. ಕರ್ನಾಟಕದಲ್ಲಿ ಅತಿ ಹೆಚ್ಚು 124 ಕೋಟಿ 3 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದಾದ ಬಳಿಕ ಬಂಗಾಳದಲ್ಲಿ 51 ಕೋಟಿ 7 ಲಕ್ಷ, ರಾಜಸ್ಥಾನದಲ್ಲಿ 40 ಕೋಟಿ 7 ಲಕ್ಷ, ಉತ್ತರ ಪ್ರದೇಶದಲ್ಲಿ 35 ಕೋಟಿ 3 ಲಕ್ಷ, ಬಿಹಾರದಲ್ಲಿ 31 ಕೋಟಿ 5 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
3. ಗುಜರಾತ್‌ನಿಂದ 485 ಕೋಟಿ 99 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದಾದ ಬಳಿಕ ತಮಿಳುನಾಡಿನಲ್ಲಿ 293 ಕೋಟಿ 2 ಲಕ್ಷ, ಪಂಜಾಬ್‌ನಲ್ಲಿ 280 ಕೋಟಿ 81 ಲಕ್ಷ, ಮಹಾರಾಷ್ಟ್ರದಲ್ಲಿ 213 ಕೋಟಿ 56 ಲಕ್ಷ ಹಾಗೂ ದೆಹಲಿಯಲ್ಲಿ 189 ಕೋಟಿ 94 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
🎯Election Commission seizes more than Rs 4650 crore nationwide since March
👉 If the seized money amounts to this much, one can only imagine how much remains unseized? This clearly illustrates how elections are conducted in India. It is unsurprising that candidates and… pic.twitter.com/9AEnYVRbh7
— Sanatan Prabhat (@SanatanPrabhat) April 16, 2024
ಹಣಕ್ಕೆ ಸಂಬಂಧಿಸಿದಂತೆ ಚುನಾವಣಾ ಸಮಯದ ನೀತಿ ಸಂಹಿತೆ ನಿಯಮಗಳೇನು ?
1. ವಿಮಾನ ನಿಲ್ದಾಣದಲ್ಲಿ 10 ಲಕ್ಷದವರೆಗೆ ನಗದು ಮತ್ತು 1 ಕೆಜಿಯವರೆಗಿನ ಚಿನ್ನವನ್ನು ಅನುಮತಿಸಲಾಗಿದೆ. ಇದಕ್ಕಿಂತ ಹೆಚ್ಚಿನ ನಗದು ಅಥವಾ ಚಿನ್ನವನ್ನು ‘ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಸೇರಿಲ್ಲ’ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲನೆಗಾಗಿ ವಶಪಡಿಸಿಕೊಳ್ಳಬಹುದು.
2. ವಾಹನದಲ್ಲಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಕಂಡುಬಂದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ‘ಈ ನಗದು ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಸೇರಿದ್ದಲ್ಲ’ ಎಂದು ದಾಖಲೆಗಳ ಮೂಲಕ ತೋರಿಸಿದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ.
3. ರಾಜಕೀಯ ಪಕ್ಷದ ಅಭ್ಯರ್ಥಿ ಅಥವಾ ಕಾರ್ಯಕರ್ತ ವಾಹನದಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ನಗದು ಅಥವಾ 10,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಮದ್ಯ, ಜೊತೆಗೆ ಡ್ರಗ್ಸ್, ಶಸ್ತ್ರಾಸ್ತ್ರಗಳು ಅಥವಾ ಉಡುಗೊರೆಗಳು ಕಂಡುಬಂದಲ್ಲಿ ವಶಪಡಿಸಿಕೊಳ್ಳಬಹುದು.
ಸಂಪಾದಕೀಯ ನಿಲುವುಮುಟ್ಟುಗೋಲು ಹಾಕಿದ ಹಣವೇ ಇಷ್ಟು ಆಗಿದ್ದರೆ, ಜಪ್ತಿಯಾಗದ ಹಣ ಎಷ್ಟು ಇರಬಹುದು ?, ಊಹಿಸಲೂ ಸಾಧ್ಯವಿಲ್ಲ ! ಇದರಿಂದ ಭಾರತದಲ್ಲಿ ಚುನಾವಣೆಗಳು ಹೇಗೆ ಸ್ಪರ್ಧಿಸುತ್ತವೆ ಎಂಬುದನ್ನು ಸ್ಪಷ್ಟವಾಗುತ್ತದೆ ! ಅಂತಹ ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಹಣವನ್ನು ಮರಳಿ ಪಡೆಯಲು ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಭ್ರಷ್ಟಾಚಾರವನ್ನು ಆಶ್ರಯಿಸುವುದರಲ್ಲಿ ಆಶ್ಚರ್ಯವೇನಿದೆ ? |