6 ಮುಸ್ಲಿಮರ ಬಂಧನ
ವಡೋದರಾ (ಗುಜರಾತ್) – ಇಲ್ಲಿನ ಪ್ರಸಿದ್ಧ ‘ಹುಸೇನಿ ಸಮೋಸಾವಾಲಾ’ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಯೂಸುಫ್ ಶೇಖ್, ನಸೀಮ್ ಶೇಖ್, ಹನೀಫ್ ಭಾಟಿಯಾರಾ, ದಿಲಾವರ್ ಪಠಾಣ್ ಮೊಯಿನ್ ಹಬದಲ ಮತ್ತು ಮೊಬೀನ್ ಶೇಖ್ ಎಂಬ 6 ಜನರನ್ನು ಬಂಧಿಸಿದ್ದಾರೆ. ಈ ಅಂಗಡಿಯಿಂದ ಗೋಮಾಂಸ ತುಂಬಿದ ಸಮೋಸಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಂಗಡಿಯಲ್ಲಿದ್ದ ಸಮೋಸ ತುಂಬಲು ತಯಾರಿಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಅಂಗಡಿಯಿಂದ 100 ಕೆಜಿ ಗೋಮಾಂಸ ದಾಸ್ತಾನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಗೋಮಾಂಸ ಸಮೋಸಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕೆಲವು ಗ್ರಾಹಕರು ಅವು ಮಾಂಸದ ಸಮೋಸ ಎಂದು ತಿಳಿದು ಖರೀದಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಆಯುಕ್ತ ಪನ್ನಾ ಮೊಮಯ ಮಾತನಾಡಿ, ಆರೋಪಿಗಳು ಹೆಚ್ಚಿನ ಪ್ರಮಾಣದಲ್ಲಿ ಹಸಿ ಸಮೋಸ ತಯಾರಿಸಿ ನಂತರ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಅಂಗಡಿಯವರು ಅದನ್ನು (ಎಣ್ಣೆಯಲ್ಲಿ) ಕರಿದು ಗ್ರಾಹಕರಿಗೆ ಕೊಡುತ್ತಿದ್ದರು. ಎಷ್ಟು ಸಮಯದಿಂದ ದನದ ಸಮೋಸಾಗಳನ್ನು ಮಾರಾಟ ಮಾಡುತ್ತಿದ್ದರು ಮತ್ತು ದನದ ಮಾಂಸವನ್ನು ಎಲ್ಲಿಂದ ತರುತ್ತಿದ್ದರು, ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮುಸಲ್ಮಾನರ ಖಾದ್ಯ ಪದಾರ್ಥಗಳ ಅಂಗಡಿಗಳಲ್ಲಿ ಆಹಾರದಲ್ಲಿ ಉಗುಳು ಅಥವಾ ಗೋಮಾಂಸದೊಂದಿಗೆ ಬೆರೆಸಲು ಪ್ರಯತ್ನ ಮಾಡುತ್ತಾರೆ ಎಂಬುದು ಅನೇಕ ಸಲ ಬಹಿರಂಗವಾಗಿದೆ. ಈಗ ಇದನ್ನು ನೋಡಿ ಹಿಂದೂಗಳು ಇಂತಹ ಅಂಗಡಿಗಳನ್ನು ಬಹಿಷ್ಕರಿಸಿದರೆ ಆಶ್ಚರ್ಯ ಅನ್ನಿಸಬಾರದು ! |