ಮುಂಬಯಿಯಲ್ಲಿ ಮಹಿಳೆಯರಿಗೆ ರಾತ್ರಿ ರೈಲು ಪ್ರಯಾಣ ಅಸುರಕ್ಷಿತ ! – ರೈಲ್ವೆ ಪೊಲೀಸ್ ವರದಿಯ ನಿಷ್ಕರ್ಷ

ಮುಂಬಯಿ – ದೇಶದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಮಹಿಳೆಯರಿಗೆ ರಾತ್ರಿಯ ರೇಲ್ವೆ ಪ್ರಯಾಣ ಅಸುರಕ್ಷಿತವಾಗಿದೆಯೆಂದು ರೇಲ್ವೆ ಪೊಲೀಸ ಮಹಾನಿರ್ದೇಶಕರ ಕಚೇರಿ ನಡೆಸಿದ ಸಮೀಕ್ಷೆಯಿಂದ ನಿಷ್ಕರ್ಷದಿಂದ ಗಮನಕ್ಕೆ ಬಂದಿದೆ. ರೇಲ್ವೆ ಪೊಲೀಸ ಮಹಾನಿರ್ದೇಶಕರ ಕಚೇರಿಯು ಮಾರ್ಚ 1 ರಿಂದ 31 ಈ ಕಾಲಾವಧಿಯಲ್ಲಿ ಮುಂಬಯಿ ಉಪನಗರ ರೈಲ್ವೆಯಲ್ಲಿ ಮಹಿಳಾ ಪ್ರಯಾಣಿಕರ ಅನುಭವಗಳು, ಸಮಸ್ಯೆಗಳು ಮತ್ತು ಶಿಫಾರಸುಗಳ ವರದಿಯನ್ನು ತೆಗೆದುಕೊಳ್ಳುತ್ತಾ ಸಮೀಕ್ಷೆಯನ್ನು ನಡೆಸಿತು.

ಮರಾಠಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ 21 ಆನ್‌ಲೈನ್ ಪ್ರಶ್ನಾವಳಿಗಳ ಸಮೀಕ್ಷೆಯಲ್ಲಿ 3 ಸಾವಿರ ಮಹಿಳಾ ಪ್ರಯಾಣಿಕರು ಭಾಗವಹಿಸಿದ್ದರು. ಅನೇಕ ಮಹಿಳಾ ಪ್ರಯಾಣಿಕರು ರಾತ್ರಿ 9 ಗಂಟೆಯ ನಂತರ, ರಾತ್ರಿ 10 ರ ನಂತರ ಶೇ. 28 ಮಹಿಳೆಯರು, ಶೇ. 40 ರಷ್ಟು ಮಹಿಳಾ ಪ್ರಯಾಣಿಕರು 11 ರ ನಂತರ ಮತ್ತು ಶೇ. 42 ರಷ್ಟು ಮಹಿಳಾ ಪ್ರಯಾಣಿಕರು ಮಧ್ಯರಾತ್ರಿ ಓಡುವ ಲೋಕಲ್ ರೇಲ್ವೆ ಪ್ರಯಾಣ ಅಸುರಕ್ಷಿತವಾಗಿದೆ ಎಂದು ಹೇಳಿದೆ. ಲೋಕಲ ಪ್ರವಾಸ ಸುರಕ್ಷಿತವಾಗಿರಬೇಕು ಎಂದು ಉಪಾಯಯೋಜನೆಗಾಗಿ ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಸರಕಾರಸಹಿತ ಪೋಲೀಸರಿಗೂ ಆತ್ಮಾವಲೋಕನವನ್ನು ಮಾಡಿಕೊಳ್ಳುವಂತಹ ವಿಷಯವಾಗಿದೆ. ಈ ಸ್ಥಿತಿ ಏಕೆ ಎದುರಾಗಿದೆ ? ಎನ್ನುವುದನ್ನು ಗಂಭೀರತೆಯಿಂದ ವಿಚಾರ ಮಾಡಿದರೆ, ಇದರ ಬಗ್ಗೆ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯಬಹುದು !

ಧರ್ಮಾಚರಣೆ ಮಾಡುವ ನೈತಿಕ ಸಮಾಜ ಇರುವ ಮಹಿಳೆಯರಿಗೆ ಸುರಕ್ಷಿತ ರಾಮರಾಜ್ಯವನ್ನು ಸ್ಥಾಪಿಸಿದ ನಂತರವೇ ಸಮಸ್ಯೆ ಬಗೆಹರಿಯುವುದು !