ಚಂಡೀಗಢ : ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಲ್ಲಿ ರಾಮಾಯಣ ಮತ್ತು ಭಗವದ್ಗೀತೆಯನ್ನು ಓದುಲು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹರಿಯಾಣದ ಮಾಜಿ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಇವರು, ಕೇಜ್ರಿವಾಲ್ ಅವರು ಮೊದಲೇ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಭಗವದ್ಗೀತೆಯನ್ನು ಓದಿದ್ದರೆ ಬಹುಶಃ ಈ ಪರಿಸ್ಥಿತಿ (ಜೈಲಿಗೆ ಹೋಗುವ) ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆಯೂ ವಿಜ್ ಇವರು ಕೇಜ್ರಿವಾಲ್ ಅವರನ್ನು ಟೀಕಿಸಿದ್ದರು. ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದರೂ ಕೇಜ್ರಿವಾಲ್ ಹಾಜರಾಗಿರಲಿಲ್ಲ. ಆಗ ವಿಜ್ ಅವರು, ‘ಇಡಿ ಸಮನ್ಸ್ ನೀಡಿದರೂ ಇಡಿ ಮುಂದೆ ಹಾಜರಾಗದ ರಾಜಕಾರಣಿಗಳನ್ನು ಕೇಜ್ರಿವಾಲ್ ಟೀಕಿಸಿದರು. ಈಗ ಇಡಿ ಮುಂದೆ ಕೇಜ್ರಿವಾಲ್ ಹಾಜರಾಗಿಲ್ಲ. ಕೇಜ್ರಿವಾಲ್ ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೋ, ಓತಿಕೇತ ಕೂಡ ಬಣ್ಣ ಬದಲಾಯಿಸುವುದಿಲ್ಲ.’ ಎಂದು ಹೇಳಿದ್ದರು.