ಮುಂಬಯಿ – ದೇಶ ನಡೆಸಲು ೩೦೦ ಸ್ಥಾನಗಳು ಸಾಕು. ಸಂವಿಧಾನ ಬದಲಾಯಿಸಲು ೪೦೦ ಸ್ಥಾನಗಳು ಬೇಕಾಗುವುದು. ‘ಅವಕಾಶ ಸಿಕ್ಕರೆ, ನಾವು ಸಂವಿಧಾನ ಬದಲಾಯಿಸುತ್ತೇವೆ’ ಎಂದು ೧೯೫೦ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಮಾಣ ವಚನ ಸ್ವೀಕರಿಸಿತ್ತು, ಎಂದು ವಂಚಿತ ಬಹುಜನ ಮೈತ್ರೀಕೂಟದ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಈ ಬಾರಿಯ ಚುನಾವಣೆಗೆ ಭಾಜಪವು ‘೪೦೦ ಪಾರ್’ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಹಾವಿಕಾಸ್ ಮೈತ್ರಿಕೂಟದೊಳಗಿನ ಬಿರುಕು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಅವರು ನಮಗೆ ಕೇವಲ ೪ ಸ್ಥಾನಗಳನ್ನು ನೀಡಿದ್ದರು, ಆದ್ದರಿಂದ ಆ ಸ್ಥಾನಗಳನ್ನು ನಾನು ಅವರಿಗೆ ಹಿಂದಿರುಗಿಸುತ್ತಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುವ ೭ ಸ್ಥಾನಗಳ ಬಗ್ಗೆ ಮಾಹಿತಿಯನ್ನು ಕಾಂಗ್ರೆಸ್ ನಮಗೆ ನೀಡಬೇಕು. ನಾವು ಅವರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತೇವೆ, ಎಂದು ಈ ಸಂದರ್ಭದಲ್ಲಿ ಹೇಳಿದರು.
Prakash Ambedkar quits Shiv Sena (UBT) alliance.#PrakashAmbedkar pic.twitter.com/nVFDKT9ldu
— Przentu (@Przentu) March 24, 2024
ಸಂಪಾದಕೀಯ ನಿಲುವು
|