Dumka Murder Case : ಧಮಾಕಾ (ಜಾರ್ಖಂಡ್)ದಲ್ಲಿ ಹಿಂದೂ ಹುಡುಗಿಯನ್ನು ಜೀವಂತವಾಗಿ ಸುಟ್ಟಿದ್ದ ಶಹರೂಖನನ್ನು ತಪ್ಪಿತಸ್ಥ ಎಂದು ಹೇಳಿದ ನ್ಯಾಯಾಲಯ !

ಮಾರ್ಚ್ ೨೮ ಕ್ಕೆ ಶಿಕ್ಷೆ !

ಅಪರಾಧಿ ಶಹರೂಖ

ದುಮಕಾ (ಜಾರ್ಖಂಡ್) – ಇಲ್ಲಿ ೧೬ ವರ್ಷದ ಹಿಂದೂ ಹುಡುಗಿಯ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ ಶಹರೂಖ ಮತ್ತು ಅವನ ಸ್ನೇಹಿತ ನಯಿಮ್ ನನ್ನು ವಿಶೇಷ ನ್ಯಾಯಾಲಯವು ಅಪರಾಧಿಗಳೆಂದು ಹೇಳಿದೆ. ಅವರಿಗೆ ಮಾರ್ಚ್ ೨೮ ರಂದು ಶಿಕ್ಷೆ ವಿಧಿಸಲಾಗುವುದು. ನಯಿಮ್ ಇವನೆ ಶಾಹರೂಖನಿಗೆ ಹುಡುಗಿಗೆ ಸುಡುವುದಕ್ಕೆ ಪೆಟ್ರೋಲ್ ತಂದು ಕೊಟ್ಟಿದ್ದನು.

ದುಮಕಾ ಇಲ್ಲಿ ಆಗಸ್ಟ್ ೨೩, ೨೦೨೨ ರಂದು ಈ ಘಟನೆ ನಡೆದಿತ್ತು. ಶಹರೂಖ ಈ ಹುಡುಗಿಯ ನೆರೆಮನೆಯಲ್ಲಿ ವಾಸಿಸುತ್ತಿದ್ದನು ಮತ್ತು ಅವನು ಅನೇಕ ದಿನದಿಂದ ಸ್ನೇಹ ಬೆಳೆಸಲು ಕೇಳುತ್ತಿದ್ದನು. ಹುಡುಗಿ ಒಪ್ಪದೇ ಇದ್ದಾಗ ಆಕ್ರೋಶಗೊಂಡಿರುವ ಶಾಹರೂಖನು ಆಕೆಯ ಮನೆಯ ಕಿಟಕಿಯಿಂದ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಇದರಲ್ಲಿ ಆಕೆ ಶೇಕಡ ೯೦ ರಷ್ಟು ಸುಟ್ಟಿದ್ದಳು ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಸಾವನ್ನಪ್ಪಿದಳು. ಮೃತ್ಯುವಿನ ಮೊದಲು ‘ಶಾಹರೂಖನಿಗೆ ನನ್ನ ಹಾಗೆ ಸಾವು ಬರಲಿ’ ಎಂದು ಆಕೆ ಹೇಳುತ್ತಿದ್ದಳು.

ಸಂಪಾದಕೀಯ ನಿಲುವು

ಇಂತಹ ಕೊಲೆಗಾರನಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಇದರಿಂದ ಇತರರಿಗೆ ಭಯ ಹುಟ್ಟಬಹುದು !