ಅಸ್ಸಾಂನಿಂದ ಇಸ್ಲಾಮಿಕ್ ಸ್ಟೇಟ್ಸ್ ಭಾರತದಲ್ಲಿಯ ಮುಖ್ಯಸ್ಥನ ಬಂಧನ

ನವ ದೆಹಲಿ – ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಹ್ಯಾರೀಸ್ ಫಾರೂಕಿ ಅಲಿಯಾಸ್ ಹರೀಶ್ ಅಜಮಲ್ ಫಾರೂಕಿಯನ್ನು ಅಸ್ಸಾಂ ಪೋಲೀಸರು ಧುಬರಿಯಿಂದ ಬಂಧಿಸಿದ್ದಾರೆ. ಜೊತೆಗೆ ಇತರ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಮೂವರು ಬಾಂಗ್ಲಾದೇಶದ ಗಡಿ ದಾಟಿ ಭಾರತದೊಳಗೆ ನುಸುಳಿದ್ದರು.

ಹ್ಯಾರಿಸ್ ಫಾರೂಕಿಯ ಸಹಚರ ಅನುರಾಗ ಸಿಂಗ್ ಅಲಿಯಾಸ್ ರೆಹಾನ ಇವನು ಹರಿಯಾಣದ ಪಾಣಿಪತ್‌ನ ಭಯೋತ್ಪಾದಕ ಇಸ್ಲಾಂನ್ನು ಸ್ವೀಕರಿಸಿದ್ದಾನೆ. ಅವನ ಪತ್ನಿ ಬಾಂಗ್ಲಾದೇಶದವಳು. ಈ ಇಬ್ಬರು ಭಯೋತ್ಪಾದನೆಯ ತರಬೇತಿ ಪಡೆದಿದ್ದಾರೆ. ಅವರು ಭಾರತದ ಅನೇಕ ಸ್ಥಳಗಳಲ್ಲಿ ಮುಸಲ್ಮಾನರನ್ನು ಸಂಘಟನೆಗೆ ಸೇರಿಸಿಕೊಂಡಿದ್ದಾರೆ. ಹಾಗೆಯೇ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ್ದರು.